ಕಾಪು: ‘ಎಸ್‌ಐಒ ಜೊತೆ ಸೇರಿರಿ’ ಅಭಿಯಾನಕ್ಕೆ ಚಾಲನೆ
Update: 2018-01-22 19:27 IST
ಕಾಪು, ಜ. 22: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ಒಂದು ತಿಂಗಳ ಕಾಲ ನಡೆಯಲಿರುವ ‘ಎಸ್‌ಐಒ ಜೊತೆ ಸೇರಿರಿ’ ಅಭಿಯಾನಕ್ಕೆ ರವಿವಾರ ಕಾಪುವಿನ ಕೊಂಬಗುಡ್ಡೆಯ ಜಾಮಿಯಾ ಮಸಿದಿಯಲ್ಲಿ ಚಾಲನೆ ನೀಡಲಾಯಿತು.
ಅಭಿಯಾನದ ಲಾಂಛನವನ್ನು ಜಮಿಯ್ಯತುಲ್ ಫಲಾಹ್ ಕಾಪು ಘಟಕದ ಅಧ್ಯಕ್ಷ ಶಭಿ ಕಾಝಿ ಬಿಡುಗಡೆಗೊಳಿಸಿದರು. ಪ್ರೊ.ಅಬ್ದುಲ್ ಅಝೀಝ್ ಸಂಘಟನೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಎಸ್‌ಐಒ ಕಾರ್ಯಚಟುವಟಿಕೆಗಳ ಬಗ್ಗೆ ನಿಹಾಲ್ ಕಿದಿಯೂರು ವಿವರಿಸಿ ದರು. ಉಡುಪಿ ಜಿಲ್ಲಾಧ್ಯಕ್ಷ ಯಾಸೀನ್ ಕೋಡಿಬೆಂಗ್ರೆ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಅಧ್ಯಕ್ಷ ಅನ್ವರ್ ಅಲಿ ಕಾಪು, ಸಾಮಾಜಿಕ ಕಾರ್ಯಕರ್ತ ಸಲೀಂ ಕಾಪು, ಜಿಲ್ಲಾ ಕಾರ್ಯ ದರ್ಶಿ ಅಫ್ವಾನ್, ಅಭಿಯಾನ ಸಂಚಾಲಕ ಫೈಸಲ್ ಮಲ್ಪೆಮೊದಲಾದ ವರು ಉಪಸ್ಥಿತರಿದ್ದರು.