ಜ. 30: ಪುತ್ತೂರಿನಲ್ಲಿ ಸೌಹಾರ್ದತೆಗಾಗಿ 'ಮಾನವ ಸರಪಳಿ'

Update: 2018-01-22 15:06 GMT

ಪುತ್ತೂರು, ಜ. 22: ಕರ್ನಾಟಕದಲ್ಲಿ ಶಾಂತಿ ಸಂದೇಶ ಸಾರಲು, ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ , ಮುಖ್ಯ ನಗರ ಪಟ್ಟಣಗಳಲ್ಲಿ ರಾಜ್ಯಾದ್ಯಂತ ಏಕಕಾಲಕ್ಕೆ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಜ.30ರಂದು ಪುತ್ತೂರಿನಲ್ಲಿ ಸೌಹಾರ್ದತೆಗಾಗಿ ಮಾನವ ಸರಪಳಿ ನಡೆಸಲು ತೀರ್ಮಾನಿಸಲಾಯಿತು.

ಸೋಮವಾರ ಪುತ್ತೂರಿನ ನಿರೀಕ್ಷಣ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿ’ಸೋಜ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಜ.30ರಂದು ಸಂಜೆ 4 ಗಂಟೆಗೆ ಪುತ್ತೂರು ಬಸ್ ನಿಲ್ದಾಣದ ಗಾಂಧಿಕಟ್ಟೆಯಿಂದ- ಮುಖ್ಯ ಅಂಚೆ ಕಚೇರಿತನಕ ಮಾನವ ಸರಪಳಿಯನ್ನು ಹಮ್ಮಿಕೊಳ್ಳಲಾಗು ವುದು. ಈ ಮಾನವ ಸರಪಳಿ ವ್ಯಾಪ್ತಿಯಲ್ಲಿ ದೇವಸ್ಥಾನ, ಬಸದಿ, ಚರ್ಚ್ ಹಾಗೂ ಮಸೀದಿಯನ್ನೊಳಗೊಂಡಿರುತ್ತದೆ. ಈ ಕಾರ್ಯಕ್ರಮವು ಪಕ್ಷತೀತವಾದ ಮಾನವ ಬಂಧುತ್ವ ಬೆಸೆಯುವ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮದಲ್ಲಿ ಸೌಹಾರ್ದತೆಯನ್ನು ಬಯಸುವ ಎಲ್ಲಾ , ಜಾತಿ , ಮತ ಧರ್ಮಗಳ ಜನರು ಭಾಗವಹಿಸಿ ಸಹೃದಯತೆಯಿಂದ ಯಸಸ್ವಿಗೊಳಿಸಬೇಕೆಂದು ಮನವಿ ಮಾಡಲಾಯಿತು.

ಕೋಮುವಾದಕ್ಕೆ ಪ್ರತಿಯಾಗಿ ಸಾಮರಸ್ಯವನ್ನು, ದ್ವೇಷಕ್ಕೆ ಪ್ರತಿಯಗಿ ಸ್ನೇಹವನ್ನು, ಕುಂತ್ರಕ್ಕೆ ಪ್ರತಿಯಾಗಿ ಪ್ರಾಮಾನಿಕತೆಯನ್ನು ನಾವು ಎತ್ತಿ ಹಿಡಿಯಬೇಕಾಗಿದ್ದು ಈ ಹಿನ್ನೆಲೆಯಲ್ಲಿ ಸ್ನೇಹದ ಸಾಮರಸ್ಯದ ಸಂದೇಶವನ್ನು ಕರ್ನಾಟಕದ ಎಲ್ಲಾ ಭಾಗದಲ್ಲಿ ಹರಡುವುದು ಶಾಂತಿ ಪ್ರಿಯರಾದ ನಮ್ಮೆಲ್ಲರ ಕರ್ತವ್ಯವಾಗಬೇಕು. 1948 ಜ.30 ರಂದು ರಾಷ್ಟ್ರಪಿತ ಮಹಾತ್ಮಾಗಾಂಧಿಯವರು ಹುತಾತ್ಮರಾದ ಆ ದಿನದಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಾಮರಸ್ಯವನ್ನು ಮರಳಿಗಳಿಸುವ ಉದ್ದೇಶವಾಗಿದೆ ಎಂದು ಎಂದು ವಿಲ್ಫ್ರೆಡ್ ಡಿ’ಸೋಜ ತಿಳಿಸಿದರು.

ಸಭೆಯನ್ನುದ್ದೇಶಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಸಿಪಿಐಎಂ ತಾಲೂಕು ಕಾರ್ಯದರ್ಶಿಯಾದ ನ್ಯಾಯವಾದಿ ಪಿ.ಕೆ. ಸತೀಶನ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಮಾನವ ಬಂಧುತ್ವದ ವೇದಿಕೆಯ ಮುಖಂಡ ಅಮಳ ರಾಮಚಂದ್ರ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಬಾಸ್ಕರ ಕೋಡಿಂಬಾಳ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಹೋಳಿಕಟ್ಟೆ, ನಗರ ಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯರಾ ಎಚ್. ಮಹಮ್ಮದಾಲಿ, ಜೊಹರಾ ನಿಸಾರ್, ಅನ್ವರ್ ಖಾಸಿಂ, ಜೆಸಿಂತಾ ಮಸ್ಕರೇನಸ್, ಸ್ವರ್ಣಲತಾ ಹೆಗ್ಡೆ, ಮುಖೇಶ್ ಮೊಟ್ಟೆತ್ತಡ್ಕ, ಶೈಲಾಪೈ, ಶಕ್ತಿ ಸಿನ್ಹಾ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಲ್ಲೆಗ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜಾ, ಜೋಡಿ ಸೋಜಾ ಚಿಕ್ಕಪುತ್ತೂರು, ನೆಲ್ಲಿಕಟ್ಟೆ ಬಾಲಕೃಷ್ಣ ರೈ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಯೋಜಕ ಇಸಾಕ್ ಸಾಲ್ಮರ, ಜಿಲ್ಲಾ ವಕ್ಫ್  ಸದಸ್ಯ ಹನೀಫ್ ಮಾಡಾವು, ಜೆಡಿಎಸ್ ಮುಖಂಡ ಯುನಿಕ್ ಅಬ್ದುಲ್ ರಹಿಮಾನ್, ಉದ್ಯಮಿ ಡೆನ್ನಿಸ್ ಮಸ್ಕರೇನಸ್ ಸೇಡಿಯಾಪು, ಬೋಳೋಡಿ ಚಂದ್ರಹಾಸ ರೈ, ನಗರಸಭಾ ಸದಸ್ಯರುಗಳಾದ ಖಾದರ್ ಹಾಜಿ ಕೆನರಾ, ವೇಣುಗೋಪಾಲ್ ಮೊಟ್ಟೆತ್ತಡ್ಕ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲೋಕೇಶ್ ಹೆಗ್ಡೆ, ಜೆಡಿಎಸ್ ಮುಖಂಡ ಇಬ್ರಾಹಿಂ ಪರ್ಪುಂಜ, ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ ಅಂಚನ್, ಮಹೇಶ್ಚಂದ್ರ ಸಾಲಿಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸೀಫ್, ಬೆಳ್ಳಿಪ್ಪಾಡಿ ಸುಬಾಸ್ ರೈ, ನ್ಯಾಯವಾದಿ ನೋಟರಿ ಜಿ ಜಗನ್ನಾಥ್ ರೈ, ನ್ಯಾಯವಾದಿ ಸಿದ್ದಿಕ್ ಹಾಜಿ ಮತ್ತಿತರರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News