ಫೆ.3: ಅಬ್ಬಕ್ಕ ಉತ್ಸವದ ಅಂಗವಾಗಿ ಕ್ರೀಡೋತ್ಸವ
ಮಂಗಳೂರು, ಜ.22: ಪ್ರಸಕ್ತ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವದ ಅಂಗವಾಗಿ ದ.ಕ. ಜಿಲ್ಲಾಡಳಿತ, ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾಟವನ್ನು ಫೆ.3ರಂದು ಸೋಮೇಶ್ವರ ಗ್ರಾಮದ ಕೊಲ್ಯ ಮೈದಾನದಲ್ಲಿ ನಡೆಸಲಾಗುವುದು.
ಕುಸ್ತಿ ಪಂದ್ಯಾಟವು ಏಳು ವಿಭಾಗಗಳಲ್ಲಿ (44 ಕೆ.ಜಿ, 48 ಕೆ.ಜಿ., 53 ಕೆ.ಜಿ., 58 ಕೆ. ಜಿ., 63 ಕೆ.ಜಿ., 69 ಕೆ.ಜಿ., 73 ಕೆ.ಜಿ.) ನಡೆಯಲಿದೆ. 53ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತರಿಗೆ ಅಬ್ಬಕ್ಕ ಶ್ರೀಗೌರವ ನೀಡಿ ಪುರಸ್ಕರಿಸಲಾಗುವುದು.
ಪುರುಷರಿಗೆ ಜಿಲ್ಲಾಮಟ್ಟದ ಆಹ್ವಾನಿತ ತಂಡಗಳಿಗೆ ಫುಟ್‌ಬಾಲ್ ಪಂದ್ಯಾಟವನ್ನು ಫೆ.3ರಂದು ಉಳ್ಳಾಲ ಭಾರತ್ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗುವುದು. ಮಹಿಳಾ ಕುಸ್ತಿ ಮತ್ತು ಪುರುಷರ ಫುಟ್‌ಬಾಲ್ ಪಂದ್ಯಾಟದ ವಿಜೇತರಿಗೆ ನಗದು ಹಾಗೂ ಸ್ಮರಣಿಕೆ ನೀಡಿ ಪುರಸ್ಕರಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಕುಸ್ತಿಪಟುಗಳು ಮತ್ತು ಫುಟ್‌ಬಾಲ್ ತಂಡಗಳು ವಿವರವಾದ ಪ್ರವೇಶ ಪತ್ರವನ್ನು ಜ.27ರೊಳಗೆ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ದ.ಕ. ಜಿಲ್ಲೆ, ಮಂಗಳೂರು ಇವರಿಗೆ ಕಳುಹಿಸಿಕೊಡಬೇಕು. ಮಾಹಿತಿಗಾಗಿ ದೂ.ಸಂ. 0824-2451264, 9448251523, 9902747835ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.