×
Ad

ಭಟ್ಕಳ: ಜಿ.ಎಸ್.ಬಿ ಸೇವಾ ಸಮಿತಿಯ ವಾರ್ಷಿಕೋತ್ಸವ

Update: 2018-01-22 21:09 IST

ಭಟ್ಕಳ, ಜ. 22:  ಗೌಡ ಸಾರಸ್ವತ ಸಮಾಜ ಕಲ್ಯಾಣ ಸೇವಾ ಸಮಿತಿ, ಭಟ್ಕಳ ಇದರ 21ನೆ ವಾರ್ಷಿಕೋತ್ಸವವು ಭಟ್ಕಳದ ಶ್ರೀ ನಾಗಯಕ್ಷೆ ಧಮಾಥರ್ರ್ ಸಭಾಭವನದಲ್ಲಿ ಜರುಗಿತು.

ಜಿ.ಎಸ್.ಬಿ ಭಟ್ಕಳ ಯೂಟ್ಯೂಬ್ ಚಾನೆಲ್ ಹಾಗೂ ಬ್ಲಾಗ್ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ರಮಾನಂದ ನಾಯಕ, ಜಂಟಿ ನಿರ್ದೇಶಕರು ಡಿ.ಐ.ಸಿ (ಕಾರವಾರ ಹಾಗೂ ಉಡುಪಿ ಜಿಲ್ಲಾ) ಸ್ವ-ಉದ್ಯೋಗದ ಪ್ರಯೋಜನಗಳು ಹಾಗೂ ಸರ್ಕಾರದಿಂದ ಲಭ್ಯವಿರುವ ಸವಲತ್ತುಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು. ಇನ್ನೋರ್ವ ಅತಿಥಿಗಳಾದ ಶ್ರೀ ದಿನೇಶ ರಾಮದಾಸ ಪೈ, ಕಾರ್ಯನಿರ್ವಾಹಕ ಅಧ್ಯಕ್ಷರು, ಹಾಂಗ್ಯೋ ಐಸ್‌ಕ್ರೀಮ್ ಪ್ರೈ.ಲಿ ಮಾತನಾಡಿ ಭಟ್ಕಳವು ದೇವಭೂಮಿಯಾಗಿದೆ ಇಲ್ಲಿನ ಕಲೆ, ಸಂಸ್ಕೃತಿಯನ್ನು ರಕ್ಷಿಸುವುದು ಹಾಗೂ ಬೆಳೆಸುವುದು ಭಟ್ಕಳಿಗರ ಕರ್ತವ್ಯ. ಉದ್ಯಮ ಕ್ಷೇತ್ರದಲ್ಲಿ ಭಟ್ಕಳಿಗರ ಕೊಡುಗೆ ಹಾಗೂ ಸಾಧನೆ ಅಪಾರವಾಗಿದೆ ಎಂದು ಹೇಳಿದರು. 

ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಸಾಧನೆಗೈದ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಭಟ್ಕಳಿಗ ಶ್ರೀ ರಾಜಾರಾಮ ಪ್ರಭು ರವರನ್ನು ಹಾಗೂ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀ ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಅಧ್ಯಕ್ಷರಾದ ಶ್ರೀ ರಾಮದಾಸ ಪ್ರಭು ರವರನ್ನು ದಂಪತಿ ಸಹಿತ ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ನರೇಂದ್ರ ನಾಯಕ, ಸುಬ್ರಾಯ ಕಾಮತ, ಜಿ.ಎಸ್.ಎಸ್ ಅಧ್ಯಕ್ಷರಾದ ಕಿರಣ ಶಾನಭಾಗ, ಮಹಿಳಾ ಸಮಿತಿ ಅಧ್ಯಕ್ಷರಾದ ನೀತಾ ಕಾಮತ ಉಪಸ್ಥಿತರಿದ್ದರು. ಉದ್ಯಮಿ ನಾರಾಯಣ ಶಾನಭಾಗ, ನಾಗೇಶ ಪೈ, ಸುರೇಶ ಬಾಳ್ಗಿ ಸಹಿತ ಸಾವಿರಾರು ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಜಿ.ಎಸ್.ಬಿ ಸಮಾಜ ಬಾಂಧವರಿಂದ ರಾಷ್ಟ್ರಪ್ರೇಮ ಬಿಂಬಿಸುವ, ಸಾಮಾಜಿಕ ಜಾಗೃತಿ ಮೂಡಿಸುವ ಭಾರತಿಯ ಸಂಸ್ಕೃತಿ ಅನಾವರಣಕ್ಕೆ ಪೂರಕವಾದ ವಿವಿಧ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ವತ ವಿಶಾರದೆ ಶ್ರೀಮತಿ ಪಲ್ಲವಿ ಸತ್ಯೇಂದ್ರ ನಾಯಕ್ ಹಾಗೂ ಶ್ರೀನಾಥ ಪೈ ನಿರೂಪಿಸಿದರು, ಸಮಿತಿ ಉಪಾಧ್ಯಕ್ಷರಾದ ಅನಿಲ ಪೈ ಸ್ವಾಗತಿಸಿದರು, ಗಿರಿಧರ ನಾಯಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News