×
Ad

ಬಂಟ್ವಾಳದಲ್ಲಿ ಕುರ್‌ಆನ್ ಮೌಲ್ಯಕ್ಕೆ ಚ್ಯುತಿ: ಮುಸ್ಲಿಂ ಒಕ್ಕೂಟದಿಂದ ಕುಮಾರಸ್ವಾಮಿಗೆ ಮನವಿ

Update: 2018-01-22 21:29 IST

ಮಂಗಳೂರು, ಜ. 22: ಬಂಟ್ವಾಳ ನಗರ ಠಾಣೆ ಪೊಲೀಸರು ತನಿಖೆಯ ನೆಪದಲ್ಲಿ ಆರೋಪಿಯ ಮನೆಗೆ ಧಾವಿಸಿ ಅಲ್ಲಿನ ಪವಿತ್ರ ಗ್ರಂಥವನ್ನು ನೆಲಕ್ಕೆಸೆದು ಅಪಮಾನ ಮಾಡಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ನಿಯೋಗವು ಇತ್ತೀಚೆಗೆ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿತು.

ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳನ್ನೊಳಗೊಂಡು ಮುಸ್ಲಿಂ ಸಂಘಟನೆಗಳ ಒಕ್ಕೂಟವು ಹಲವು ತಿಂಗಳುಗಳಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಸರಕಾರದ ಗಮನ ಸೆಳೆದಿತ್ತು. ತಪ್ಪಿತಸ್ಫ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅನೇಕ, ಪ್ರತಿಭಟನೆ, ಹೋರಾಟಗಳು ನಡೆದಿದ್ದವು. ಆದರೆ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ಧಾರ್ಮಿಕ ಗ್ರಂಥಕ್ಕೆ ಧಕ್ಕೆ ತಂದಿರುವ ಪ್ರಕರಣವನ್ನು ನಿರ್ಲಕ್ಷಿಸಿರುವುದನ್ನು ಮನಗೊಂಡು ಒಕ್ಕೂಟವು ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಧಾರ್ಮಿಕ ಗ್ರಂಥ ಚ್ಯುತಿಗೆ ಸಂಬಂಧಿಸಿ ಸದನದೊಳಗೆ ಧ್ವನಿ ಎತ್ತುವಂತೆ ಆಗ್ರಹಿಸಿತು.

ನಿಯೋಗದಲ್ಲಿ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್, ಹಮೀದ್ ಕುದ್ರೋಳಿ, ಮುಹಮ್ಮದ್ ಹನೀಫ್ ಯು., ಸಿ.ಎಂ.ಮುಸ್ತಫಾ, ಇಸ್ಮಾಯೀಲ್ ಪನೀರ್, ನೌಶಾದ್ ಬಂದರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News