ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ 'ಬ್ಯಾಂಕೊ ಪುರಸ್ಕಾರ್ 2017'ಪ್ರಶಸ್ತಿ

Update: 2018-01-22 16:12 GMT

ಭಟ್ಕಳ, ಜ. 22: ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೋ-ಆಪರೇಟಿವ್ ಬ್ಯಾಂಕ್ ಎಂಬ ಖ್ಯಾತಿಯನ್ನು ಹೊಂದಿರುವ ಭಟ್ಕಳದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ 2017ನೇ ಸಾಲಿನ ಬ್ಯಾಂಕೊ ಪುರಸ್ಕಾರ್ ಪ್ರಶಸ್ತಿ ಲಭಿಸಿದ್ದು ನಿರಂತರವಾಗಿ ಕಳೆದ ಎರಡು ವರ್ಷಗಳಿಂದ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊ ಳ್ಳುತ್ತಿದೆ ಎಂದು ಪ್ರಧಾನ ವ್ಯವಸ್ಥಾಪಕ ಎ.ಎಸ್. ರಝಾಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎವೀಸ್ ಪಬ್ಲಿಕೇಶನ್, ಕೊಲ್ಹಾಪುರ ಹಾಗೂ ಗ್ಯಾಲೆಕ್ಸಿ ಇನಮಾ, ಪುಣೆ ಇವರ ಸಹಯೋಗದಲ್ಲಿ ಜ. 18ರಿಂದ 20 ರವರೆಗೆ ಹೈದರಾಬಾದನಲ್ಲಿ ನಡೆದ ಎಡ್ವಂಟೇಜ್- 2018 ಮೂರು ದಿವಸಗಳ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯದ ಪ್ರತಿಷ್ಟಿತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕು 'ಬ್ಯಾಂಕೊ ಪುರಸ್ಕಾರ್- 2017'   “All India Urban Bank with Mix Business between 501 to 750 crores category“ ಪ್ರಶಸ್ತಿಗೆ ಭಾಜನವಾಗಿದೆ.

ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ಹಾಗೂ ಬ್ಯಾಂಕಿನ ಪ್ರಧಾನ ಕಚೇರಿಯ ವ್ಯವಸ್ಥಾಪಕ ಶಂಭು ಹೆಗಡೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು. ವಿವಿಧ ರಾಜ್ಯದಿಂದ ಭಾಗವಹಿಸಿದ ಸುಮಾರು 500 ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಯಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳು ವಲ್ಲಿ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಜಯಗಳಿಸಿದೆ.

ತೆಲಂಗಾಣದ ಉಪ ಮುಖ್ಯಮಂತ್ರಿ ಮುಹಮ್ಮದ್ ಮೆಹಮೂದ್ ಪ್ರಶಸ್ತಿಯನ್ನು ಪ್ರದಾನಿಸಿದರು. ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗ್ರಾಹಕ ರಿಗೆ ಅತ್ಯುನ್ನತ ಬ್ಯಾಂಕಿಂಗ್ ಸೇವೆಯನ್ನು ನೀಡುವುದರ ಮೂಲಕ ಪ್ರಚಲಿತವಾದ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಕಳೆದ ಬಾರಿಯೂ 251 ಕೋಟಿ ರೂ. ಯಿಂದ 500 ಕೋಟಿ ರೂ. ಠೇವಣಿ ಗಳಿಸಿದ ಬ್ಯಾಂಕ್ ವಿಭಾಗ ದಲ್ಲಿ 'ಬ್ಯಾಂಕೊ ಪುರಸ್ಕಾರ್-2016' ಪ್ರಶಸ್ತಿಯನ್ನು ಪಡೆದಿರುವುದು ಸ್ಮರಣಿಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News