×
Ad

​ಶಿವರಾಜ್ ಕರ್ಕೇರ ಕೊಲೆ ಪ್ರಕರಣ ಬೇಧಿಸಿದ ಸಿಸಿಬಿ ಪೊಲೀಸರು: ಮೂವರು ವಶಕ್ಕೆ

Update: 2018-01-22 22:01 IST
​ಶಿವರಾಜ್

ಮಂಗಳೂರು, ಜ. 22: ಬೆಂಗ್ರೆಯಲ್ಲಿ ನಡೆದ ಶಿವರಾಜ್ ಕರ್ಕೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ತಣ್ಣೀರುಬಾವಿ ನಿವಾಸಿಗಳಾದ ಸುನಿಲ್ ಪೂಜಾರಿ (32), ಧೀರಜ್ (25) ಹಾಗೂ ಗದಗ ಜಿಲ್ಲೆಯ ಪ್ರಸ್ತುತ ತಣ್ಣೀರುಬಾವಿಯಲ್ಲಿರುವ ಮಲ್ಲೇಶ ಯಾನೆ ಮಾದೇಶ (23) ಬಂಧಿತ ಆರೋಪಿಗಳು.

ಆರೋಪಿಗಳು ಹಳೆಯ ವೈಯಕ್ತಿಕ ದ್ವೇಷಕ್ಕಾಗಿ ಈ ಕೊಲೆ ನಡೆಸಿದ್ದಾರೆ. ಕೊಲೆ ಪ್ರಕರಣದಲ್ಲಿ ಇತರ ಕೆಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಶಾಂತರಾಮ್, ಪಿಎಸ್‌ಐ ಶ್ಯಾಮ್‌ಸುಂದರ್, ಎಎಸ್‌ಐ ಶಶಿಧರ್ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ರಾಮಪೂಜಾರಿ, ಗಣೇಶ್, ಚಂದ್ರಶೇಖರ, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ, ಪ್ರಶಾಂತ್ ಶೆಟ್ಟಿ, ಅಶಿತ್ ಡಿಸೋಜಾ, ತೇಜಕುಮಾರ್ ಹಾಗೂ ರಿತೇಶ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News