ಅಪಘಾತ: ಗಾಯಾಳು ಮಹಿಳೆ ಮೃತ್ಯು
Update: 2018-01-22 22:10 IST
ಬ್ರಹ್ಮಾವರ, ಜ.22: ಉಪ್ಪೂರು ಗ್ರಾಮದ ರಿಲಾಯಬಲ್ ಕ್ಯಾಶೂ ಫ್ಯಾಕ್ಟರಿ ಬಳಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಜ.20ರಂದು ಮೃತಪಟ್ಟಿದ್ದಾರೆ.
ಮೃತರನ್ನು ಕುಕ್ಕೆಹಳ್ಳಿಯ ಸಂಜಯ್ ಎಂಬವರ ಪತ್ನಿ ಸುರೇಖಾ(33) ಎಂದು ಗುರುತಿಸಲಾಗಿದೆ. ಇವರು ಜ.11ರಂದು ಸಂಜೆ ತನ್ನ ಪತಿ ಸಂಜಯ್ ಜೊತೆ ಬೈಕಿನಲ್ಲಿ ಕುಕ್ಕೆಹಳ್ಳಿಯಿಂದ ಕೊಳಲಗಿರಿ ಮಾರ್ಗವಾಗಿ ಉಡುಪಿಗೆ ಹೋಗುತ್ತಿದ್ದಾಗ ಉಪ್ಪೂರುನಲ್ಲಿ ಬೈಕ್ ಸ್ಕಿಡ್ ಆಗಿ ಬಿತ್ತೆನ್ನಲಾಗಿದೆ. ಇದರ ಪರಿಣಾಮ ಸುರೇಖ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಸುರೇಖ ಜ.20ರಂದು ಮಧ್ಯಾಹ್ನ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.