ಕುಂದಾಪುರ: ಲಾಡ್ಜ್‌ನಲ್ಲಿ ರೂಮ್ ಪಡೆದು ಟಿವಿಯನ್ನೇ ಕಳವುಗೈದರು !
Update: 2018-01-23 22:17 IST
ಕುಂದಾಪುರ, ಜ.23: ಲಾಡ್ಜ್‌ವೊಂದರಲ್ಲಿ ಎರಡು ರೂಮ್‌ಗಳನ್ನು ಬಾಡಿಗೆ ಪಡೆದುಕೊಂಡ ಇಬ್ಬರು ರಾತ್ರೋರಾತ್ರಿ ಅಲ್ಲಿದ್ದ ಟಿವಿಯನ್ನೇ ಕಳವುಗೈದು ಪರಾರಿಯಾಗಿರುವ ಘಟನೆ ಹಂಗಳೂರು ಎಂಬಲ್ಲಿ ಜ.21ರಂದು ರಾತ್ರಿ ವೇಳೆ ನಡೆದಿದೆ.
ರಾತ್ರಿ ವೇಳೆ ಬೆಂಗಳೂರಿನ ವಾಸುದೇವ ಕೆ.ಎನ್. ಎಂಬಾತ ಇನ್ನೊಬ್ಬನ ಜೊತೆ ಹಂಗಳೂರಿನ ನಗು ಪ್ಯಾಲೇಸ್ ಲಾಡ್ಜ್‌ಗೆ ಬಂದು ಒಂದು ರೂಮನ್ನು ಕೇಳಿ ಪಡೆದಿದ್ದು, ತಡ ರಾತ್ರಿ ಮತ್ತೆ ಬಂದು ತನ್ನ ಜೊತೆಯಲ್ಲಿದ್ದ ವ್ಯಕ್ತಿ ಗೊರಕೆ ಹೊಡೆಯುತ್ತಿದ್ದು ಇನ್ನೊಂದು ರೂಮನ್ನು ನೀಡುವಂತೆ ಕೇಳಿ ಪಡೆದಿದ್ದನು.
ಜ. 22ರಂದು ರಾತ್ರಿಯಾದರೂ ಇವರಿಬ್ಬರೂ ಊಟ, ತಿಂಡಿಗೆ ಹೊರಗೆ ಬಾರದಿರುವರಿಂದ ಅನುಮಾನಗೊಂಡ ಲಾಡ್ಜ್‌ನ ಮ್ಯಾನೇಜರ್ ಎರಡು ರೂಮಿನ ಬಾಗಿಲು ತೆಗೆದು ನೋಡಿದಾಗ ಅಲ್ಲಿದ್ದ ಎರಡು ಟಿವಿಗಳು ಕಳವಾಗಿರುವುದು ಕಂಡುಬಂತು. ಇವುಗಳ ಮೌಲ್ಯ 20,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.