ಹೆಬ್ರಿ ಬಂಟರ ಸಮಾವೇಶದಲ್ಲಿ ಸಾಧಕರಿಗೆ ಸಮ್ಮಾನ
ಹೆಬ್ರಿ, ಜ.23: ಬಂಟರ ಯಾನೆ ನಾಡವರ ಸಂಘ ಹೆಬ್ರಿ-ಅಜೆಕಾರು ವಲಯದ ಆಶ್ರಯದಲ್ಲಿ ಬಂಟರ ಸಮಾವೇಶವನ್ನು ಹೆಬ್ರಿ ಶ್ರೀಮತಿ ಶೀಲಾ ಸುಬೋಧ ಬಲ್ಲಾಳ್ ಬಂಟರ ಭವನದಲ್ಲಿ ಜ.21ರಂದು ಜರಗಿತು.
ಸಂಘದ ಮಾಜಿ ಅಧ್ಯಕ್ಷ ಬಿ.ವಾಸುದೇವ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ಬಿ. ರಮಾನಂದ ಹೆಗ್ಡೆ, ಟಿ.ಭೋಜ ಶೆಟ್ಟಿ, ಸಂಘದ ಮಾಜಿ ಕೋಶಾಧಿಕಾರಿ ನೀರೆ ಕೃಷ್ಣ ಶೆಟ್ಟಿ, ಮಾತೃಸಂಘದ ನಿರ್ದೇಶಕ ಬಿ.ಕರುಣಾಕರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಡಿ.ಚಂದ್ರಹಾಸ ರೈ, ಕಾರ್ಯದರ್ಶಿ ಜಪ್ತಿ ಸಂತೋಷ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷ ಕೆ.ಬಾಲಚಂದ್ರ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಸ್ಕಾರ್ಪ್ ತಯಾ ರಿಕೆಯಲ್ಲಿ ಗಿನ್ನಿಸ್ ದಾಖಲೆ ಮಾಡಿದ ರೇಖಾ ಬಿ.ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾನದಿ ವಿಠಲ ಶೆಟ್ಟಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಬ್ರಿ ಉದಯಕುಮಾರ್ ಶೆಟ್ಟಿ, ಕೆ.ವಿಶ್ವನಾಥ ಶೆಟ್ಟಿ, ಎಚ್.ನಾಗರಾಜ ಶೆಟ್ಟಿ, ಕಾರ್ಕಳ ಎಪಿಎಂಸಿ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ, ಶಿಕ್ಷಕ ಮಂಜುನಾಥ ಶೆಟ್ಟಿ, ತಾಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಾರ್ಕಳ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ, ಕಾರ್ಯದರ್ಶಿ ಬೇಬಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ವಹಿಸಿದ್ದರು. ಹೆಬ್ರಿ ಅಜೆಕಾರು ವಲಯದ ಪ್ರತಿಭಾನ್ವಿತ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ಬಂಟರ ಸಂಘ ಬೆಂಗಳೂರು, ಮಂಗಳೂರು ಹಾಗೂ ಹೆಬ್ರಿ ಸಂಘದಿಂದ ಒಟ್ಟು 1.21ಲಕ್ಷ ರೂ. ಮೊತ್ತ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಂಘದ ಕೋಶಾಧಿಕಾರಿ ಡಾ.ಸಂತೋಷ ಕುಮಾರ್ ಶೆಟ್ಟಿ, ಸಹಕಾರ್ಯದರ್ಶಿ ಸಂತೋಷ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಬಾನು ಪಿ.ಬಲ್ಲಾಳ್, ಕಾರ್ಯದರ್ಶಿ ಜ್ಯೋತಿ ಕೆ.ಶೆಟ್ಟಿ, ಸಂದೀಪ್ ಎನ್.ಶೆಟ್ಟಿ, ಕಾರ್ಯ ದರ್ಶಿ ದಿನೇಶ್ ಶೆಟ್ಟಿ, ಬಿ.ಹರ್ಷ ಶೆಟ್ಟಿ, ವಾದಿರಾಜ ಶೆಟ್ಟಿ, ಶಂಕರ ಶೆಟ್ಟಿ, ಚಿರಂಜಿತ್ ಅಜಿಲ, ಯಶೋಧ ಶೆಟ್ಟಿ, ನಿರ್ಮಲಾ ಎಸ್.ಹೆಗ್ಡೆ, ಪ್ರಕಾಶ್ ಶೆಟ್ಟಿ, ನವೀನ್ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು.