×
Ad

ಜ. 24ರಿಂದ ಕನ್ನಂಗಾರ್ ಬೈಪಾಸ್‌ನಲ್ಲಿ ಸ್ವಲಾತ್ ವಾರ್ಷಿಕ

Update: 2018-01-23 22:59 IST

ಪಡುಬಿದ್ರೆ, ಜ. 23: ಜಮಾಲಿಯ್ಯ ಮಸ್ಜಿದ್ ಕನ್ನಂಗಾರ್ ಬೈಪಾಸ್ ಇದರ ವತಿಯಿಂದ ಸ್ವಲಾತ್ ವಾರ್ಷಿಕ ಅಂಗವಾಗಿ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಸ್ವಲಾತ್ ಮಜ್ಲಿಸ್ ಜಮಾಲಿಯ್ಯ ಮಸ್ಜಿದ್ ಮುಂಭಾಗದಲ್ಲಿ ಜ. 24 ಮತ್ತು 25ರಂದು ನಡೆಯಲಿದೆ.

ಜ. 24ರಂದು ರಾತ್ರಿ 8.30ಗಂಟೆಗೆ ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದ್ದು, ಕನ್ನಂಗಾರ್ ಜುಮಾ ಮಸೀದಿ ಮುದರ್ರಿಸ್ ಅಶ್ರಫ್ ಸಖಾಫಿ ಕಿನ್ಯ ಉದ್ಘಾಟಿಸಲಿದ್ದಾರೆ.

ಹಾಫಿರ್ ಮುಹಮ್ಮದ್ ಸ್ವಾದಿಕ್ ಫಳಿಲಿ ನೇತೃತ್ವ ವಹಿಸಲಿದ್ದಾರೆ. ನಅತೇ ಶರೀಫ್‌ನ್ನು ಮುಹಮ್ಮದ್ ನಬೀಲ್ ಬೆಂಗಳೂರು ನೆರವೇರಿಸಲಿದ್ದು, ಜಮಾಲಿಯ್ಯ ಮಸ್ಜಿದ್ ಅಧ್ಯಕ್ಷ ಯು.ಕೆ.ಅಬ್ದುಲ್ ಹಮೀದ್ ಮಿಲಾಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಜ.25ರಂದು ಸ್ವಲಾತ್ ಮಜ್ಲಿಸ್ ನಡೆಯಲಿದ್ದು, ಮುಹಮ್ಮದ್ ಅಶ್ರಫ್ ಜೌಹರಿ ಎಮ್ಮೆಮಾಡು ಪ್ರಭಾಷಣ ಮಾಡಲಿದ್ದು, ಅಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಸ್ವಲಾತ್ ನೇತೃತ್ವ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಕಾಪು ಶಾಸಕ ವಿನಯಕುಮಾರ್ ಸೊರಕೆ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News