ಕ್ರಿಕೆಟ್ ಪಂದ್ಯಾಟ: ಅಸದುಲ್ಲಾಹ್ ಮಡಿಲಿಗೆ ಎನ್.ಜಿ.ಟಿ. ಟ್ರೋಫಿ

Update: 2018-01-23 17:47 GMT

ಭಟ್ಕಳ, ಜ. 23: ತಾಲೂಕು ಕ್ರೀಡಾಂಗಣದಲ್ಲಿ ಯಂಗ್ ಮುಸ್ಲಿಮ್ ಸರ್ವಿಸ್ ಅಸೋಸಿಯೇಶನ್ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಅಸಾದುಲ್ಲಾಹ್ ಸ್ಪೋರ್ಟ್ಸ್ ತಂಡವು ತನ್ನದಾಗಿಸಿಕೊಂಡಿದೆ.

ಕಳೆದ 25 ದಿನಗಳಿಂದ ಜರಗಿದ ಈ ಪಂದ್ಯಾವಳಿಯಲ್ಲಿ ಭಟ್ಕಳ ತಾಲೂಕಿನ 32 ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ರವಿವಾರ ನಡೆದ ಅಂತಿಮ ಪಂದ್ಯಾಟದಲ್ಲಿ ಅಸಾದುಲ್ಲಾಹ್ ತಂಡವು ರಾಯಲ್ ತಂಡವನ್ನು ಮಣಿಸುವುದರ ಮೂಲಕ ಟೂರ್ನಿಯನ್ನು ತನ್ನದಾಗಿಸಿಕೊಂಡಿತು.

ರಣಜಿ ಆಟಗಾರ ರಿತೇಶ್ ಭಟ್ಕಳ ಪಂದ್ಯಾವಳಿಯ ಉತ್ತಮ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮಿದರೆ, ಲಯನ್ ತಂಡದ ಇಕ್ರಾಮ್ ಮೋಟಿಯಾ ಉತ್ತಮ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News