ಮಂಗಳೂರು: ಕೆ.ಎಸ್. ಹೆಗ್ಡೆ ಆಸ್ಪತೆಯಲ್ಲಿ ಎಂಡೋಸ್ಕೋಪಿಕ್ ಅಲ್ಟ್ರಾ ಸೌಂಡ್ ಕಾರ್ಯ ವಿಧಾನ

Update: 2018-01-23 17:56 GMT

ಕೊಣಾಜೆ, ಜ. 23: ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಇಲ್ಲಿ ಮೊದಲ ಬಾರಿಗೆ ಎಂಡೋಸ್ಕೋಪಿಕ್ ಅಲ್ಟ್ರಾ ಸೌಂಡ್ ಕಾರ್ಯ ವಿಧಾನದ ಮುಖಾಂತರ ಆರಂಭಿಕ ಹಂತದಲ್ಲಿದ್ದ ಕ್ಯಾನ್ಸರ್ ರೋಗದ ಪತ್ತೆಯನ್ನು ಮಾಡಲಾಗಿದೆ.

ಸುಮಾರು 42 ವರ್ಷ ಪ್ರಾಯದ  ಸೈಫ್ (ಹೆಸರು ಬದಲಾಯಿಸಲಾಗಿದೆ) ಎಂಬವರು ಕಿಬ್ಬೊಟ್ಟೆ ನೋವು ಹಾಗೂ ಕಾಮಾಲೆ ರೋಗದಿಂದ ನರಳುತ್ತಿದ್ದು, ಬೇರೆ ಕಡೆ ಸಿ.ಟಿ. ಸ್ಕ್ಯಾನ್ ಮಾಡಿಸಿದ್ದು ಯಾವುದೇ ರೋಗ ಲಕ್ಷಣಗಳನ್ನು ಕಂಡು ಹಿಡಿಯಲಾಗದೆ, ಶಸ್ತ್ರಚಿಕಿತ್ಸಕರು ನಮ್ಮ ಆಸ್ಪತ್ರೆಗೆ ಶಿಫಾರಸು ಮಾಡಿರುತ್ತಾರೆ. ನಮ್ಮಲ್ಲಿನ ವೈದ್ಯಕೀಯ ವಿಭಾಗದ ಗ್ಯಾಸ್ಟ್ರೋ ಎಂಟರಾಲಜಿ ತಜ್ಞರು ನೂತನ ಮಾದರಿಯ ಎಂಡೋಸ್ಕೋಪಿಕ್ ಅಲ್ಟ್ರಾ ಸೌಂಡ್ ಕಾರ್ಯವಿಧಾನದಲ್ಲಿ ವಿಶೇಷ ಸೂಜಿಯನ್ನು ಬಳಸಿ ಗೆಡ್ಡೆಯನ್ನು ಪತ್ತೆ ಹಚ್ಚಿದ್ದು, ಅದನ್ನು ಪರೀಕ್ಷೆಗಾಗಿ ಕಳುಹಿಸಲಾಯಿತು.

ಎಂಡೋಸ್ಕೋಪಿಕ್ ಅಲ್ಟ್ರಾ ಸೌಂಡ್ ಕಾರ್ಯವಿಧಾನವು ಒಂದು ವಿಶೇಷವಾದ ತಂತ್ರಜ್ಞಾನವಾಗಿದ್ದು ಇದರಲ್ಲಿ ಹೊಟ್ಟೆಯ ಒಳಹೊಕ್ಕಿ ಅಲ್ಟ್ರಾ ಸೌಂಡ್ ಮುಖಾಂತರ ಗೆಡ್ಡೆ ಹಾಗೂ ಕ್ಯಾನ್ಸರ್‌ ನಂತಹ ಖಾಯಿಲೆಗಳನ್ನು ಪತ್ತೆ ಹಚ್ಚುವ ಸೂಕ್ಷ್ಮ ವಿಧಾನವಾಗಿರುತ್ತದೆ. ಹಿಸ್ಟೊ ಪೆಥೋಲಜಿ ಪರೀಕ್ಷೆಯಲ್ಲಿ ಕ್ಯಾನ್ಸರ್ ಖಾಯಿಲೆ ಎಂದು ದೃಡ ಪಟ್ಟಿದ್ದು ಮತ್ತು ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿರುವುದರಿಂದ ರೋಗಿಯನ್ನು ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ಡಾ. ರಾಜಶೇಖರ್, ಮುಖ್ಯಸ್ಥರು, ಶಸ್ತ್ರಚಿಕಿತ್ಸಾ ವಿಭಾಗ, ಡಾ ರಾಜೇಶ್ ಬಲ್ಲಾಳ್, ಯುನಿಟ್ ಚೀಫ್, ಶಸ್ತ್ರಚಿಕಿತ್ಸಾ ವಿಭಾಗ, ಡಾ ಆನಂದ ಬಂಗೇರಾ, ಮುಖ್ಯಸ್ಥರು, ಅರಿವಳಿಕಾ ವಿಭಾಗ, ಡಾ ಚಂದ್ರಶೇಖರ ಸೊರಕೆ, ಗ್ಯಾಸ್ಟ್ರೋಎಂಟರಾಲಜಿಸ್ಟ್, ಡಾ ಗಣರಾಜ ಕುಲಮರ್ವ, ಗ್ಯಾಸ್ಟ್ರೋಎಂಟರಾಲಜಿಸ್ಟ್, ಡಾ ಪದ್ಮ ಶೆಟ್ಟಿ, ಪೆಥಲಾಜಿ ವಿಭಾಗ ಹಾಗೂ ಡಾ ಜಯಪ್ರಕಾಶ್ ಶೆಟ್ಟಿ, ಮುಖ್ಯಸ್ಥರು, ಪೆಥಲಾಜಿ ವಿಭಾಗ ಇವರುಗಳ ವೈದ್ಯಕೀಯ ತಂಡ ಭಾಗವಹಿಸಿದ್ದರು.

ಜಗತ್ತಿನೆಲ್ಲೆಡೆ ಎಂಡೋಸ್ಕೋಪಿಕ್ ಅಲ್ಟ್ರಾ ಸೌಂಡ್ ಕಾರ್ಯವಿಧಾನವು ಮೆದೋಜೀರಕ ಗ್ರಂಥಿಯ ರೋಗ ಗಳನ್ನು ಪತ್ತೆಹಚ್ಚುವಲ್ಲಿ ಹೆಚ್ಚಿನ ಉಪಯುಕ್ತ ಸಾಧನವಾಗಿದೆ. ವೈದ್ಯಕೀಯ ಅಧೀಕ್ಷಕರಾದ ಮೇಜರ್ ಡಾ ಶಿವಕುಮಾರ್ ಹಿರೇಮಠ್‌ರವರು ಕೆ.ಎಸ್. ಹೆಗ್ಡೆ ಚಾರೀಟೇಬಲ್ ಆಸ್ಪತ್ರೆಯಲ್ಲಿ ಇಂತಹ ಸುಧಾರಿತ ಸೌಲಭ್ಯಗಳನ್ನು ರೋಗಿಗಳಿಗೆ ರಿಯಾಯಿತಿ ದರದಲ್ಲಿ ನೀಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News