ಸಮನ್ವಯ ಮುಸ್ಲಿಮ್ ಶಿಕ್ಷಕರ ಸಂಘ ವತಿಯಿಂದ "ಚೈತನ್ಯ-2018"

Update: 2018-01-23 17:59 GMT

ಬಂಟ್ವಾಳ, ಜ. 23: ಕಳೆದ ಹಲವು ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಗಮನಿಸಿದರೆ ತುಂಬಾ ಕಳವಳಕಾರಿ ಅಂಶವನ್ನು ನೋಡುತ್ತಿದ್ದು, ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಫಲಿತಾಂಶ ಅತ್ಯಂತ ಶೋಚನೀಯ ಎಂದು ಶಿಕ್ಷಕ ಬಿ.ಎಂ.ತುಂಬೆ ಅಭಿಪ್ರಾಯಪಟ್ಟಿದ್ದಾರೆ.

ಸಮನ್ವಯ ಮುಸ್ಲಿಮ್ ಶಿಕ್ಷಕರ ಸಂಘ ಇದರ ಬಂಟ್ವಾಳ ಘಟಕದ ವತಿಯಿಂದ ಆಯೋಜಿಸಿರುವ "ಚೈತನ್ಯ-2018" ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಬರೆಯುವ ಗಂಡು ಮಕ್ಕಳು ತಮ್ಮ ಭವಿಷ್ಯದ ಕಡೆ ಗಮನ ಹರಿಸದೇ ಮೊಬೈಲ್, ಇಂಟರ್‌ನೆಟ್‌ನಲ್ಲಿ ಸಮಯ ವ್ಯರ್ಥ ಮಾಡುವ ಮೂಲಕ ಇನ್ನಿತರ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.

ಸಂಘದ ಅಧ್ಯಕ್ಷ ಹಮೀದ್ ಕೆ. ಮಾಣಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ಮುಕ್ತರಾಗಿ ತಮ್ಮ ಭವಿಷ್ಯ, ಸಮಾಜ, ಸಮುದಾಯ ಹಾಗೂ ಹೆತ್ತವರ ಗೌರವಕ್ಕೆ ಚ್ಯುತಿ ಬಾರದಂತೆ ಉತ್ತಮ ಪ್ರಜೆಗಳಾಗಿ ಭವ್ಯ ಭಾರತದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News