ಅತ್ತೂರು ಮಹೋತ್ಸವ: ಮೂರನೆ ದಿನ 11 ಬಲಿಪೂಜೆ

Update: 2018-01-23 18:25 GMT

ಕಾರ್ಕಳ, ಜ.23: ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕದ ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಒಟ್ಟು 11 ವಿಶೇಷ ದಿವ್ಯ ಬಲಿಪೂಜೆಗಳನ್ನು ನೆರವೇರಿಸಲಾಯಿತು.

ಮೂರು ಪೂಜೆಗಳನ್ನು ಕನ್ನಡ ಭಾಷೆಯಲ್ಲಿ ನೆರವೇರಿಸಲಾಯಿತು. ಬಲಿ ಪೂಜೆಯನ್ನು ಅರ್ಪಿಸಿದ ಮೈಸೂರಿನ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಮಾತನಾಡಿ, ಬಡ ಸಹೋದರ ಸಹೋದರಿಯರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿ. ಇದರಿಂದ ನಾವು ವಿಮುಖರಾಗಬಾರದು. ಬಡಬಗ್ಗರನ್ನು ಆಧರಿಸುವವರು ಭಾಗ್ಯವಂತರು ಎಂದು ಹೇಳಿದರು.

ಸನ್ಮಾನ ಕಾರ್ಯಕ್ರಮ: ಬಲಿಪೂಜೆಯ ಬಳಿಕ ಪುಣ್ಯಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ನೆರವು ನೀಡಿದ ಗಣ್ಯರನ್ನು ಧರ್ಮಾಧ್ಯಕ್ಷರು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ವಿನಯ್ ಕುಮಾರ್ ಸೊರಕೆ, ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ, ಕಾರ್ಕಳದ ಎಎಸ್ಪಿ ಹೃಷಿಕೇಶ್ ಸೋನಾವನೆ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News