×
Ad

ಅಂತಿಮ ಟೆಸ್ಟ್ ನಲ್ಲಿ ಭಾರತದ ಆರಂಭಿಕ ಕುಸಿತ ; ಖಾತೆ ತೆರೆಯದೆ ನಿರ್ಗಮಿಸಿದ ರಾಹುಲ್

Update: 2018-01-24 14:30 IST

ಜೋಹಾನ್ಸ್ ಬರ್ಗ್ , ಜ.24: ದಕ್ಷಿಣ ಆಫ್ರಿಕ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತದ ಆರಂಭಿಕ ಅನುಭವಿಸಿದ್ದು, ದಾಂಡಿಗ ಲೋಕೇಶ್ ರಾಹುಲ್ ಖಾತೆ ತೆರೆಯದೆ ನಿರ್ಗಮಿಸಿದ್ದಾರೆ

10 ಓವರ್ ಗಳ ಮುಕ್ತಾಯಕ್ಕೆ ಭಾರತ 2 ವಿಕೆಟ್ ನಷ್ಟದಲ್ಲಿ 13 ರನ್ ಗಳಿಸಿದೆ. ಮುರಳಿ ವಿಜಯ್ ಔಟಾಗಿದ್ದಾರೆ

ಟಾಸ್ ಜಯಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು.  ಮುರಳಿ ವಿಜಯ್ ಜೊತೆ ಭಾರತದ  ಇನಿಂಗ್ಸ್ ಆರಂಭಿಸಿದ ರಾಹುಲ್ 7 ಎಸೆತಗಳನ್ನು ಎದುರಿಸಿದ್ದರೂ , ಖಾತೆ ತೆರೆಯದೆ ಫಿಲ್ಯಾಂಡರ್ ಎಸೆತದಲ್ಲಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಗೆ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 3.1 ಓವರ್ ಗಳಲ್ಲಿ  7. ಭಾರತ 8.4  ಓವರ್ ಗಳಲ್ಲಿ 13 ರನ್ ಗಳಿಸುವಷ್ಟರಲ್ಲಿ ಇನ್ನೊಂದು ವಿಕೆಟ್ ಕಳೆದುಕೊಂಡಿತು.

ಆರಂಭಿಕ ದಾಂಡಿಗ ಮುರಳಿ ವಿಜಯ್ 8 ರನ್ ಗಳಿಸಿ ರಬಾಡ ಎಸೆತಲ್ಲಿ  ಕ್ವಿಂಟನ್ ಡಿ ಕಾಕ್ ಗೆ ಕ್ಯಾಚ್ ನೀಡಿದರು.

ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ತಂಡವನ್ನು ಆಧರಿಸಿದ್ದಾರೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News