ಜ.26: ತೆಗ್ಗು ಸರ್ಕಾರಿ ಶಾಲೆಯ ಸುವರ್ಣ ಮಹೋತ್ಸವ ‘ತೆಗ್ಗು ತೇರು’
ಪುತ್ತೂರು, ಜ. 24: ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ತೆಗ್ಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ವರ್ಣಮಹೋತ್ಸವ ‘ತೆಗ್ಗು ತೇರು’ ಕಾರ್ಯಕ್ರಮ ಜ.26ರಂದು ಹಮ್ಮಿಕೊಳ್ಳಲಾಗಿದೆ ಎಂದು ಸುವರ್ಣಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅಬ್ದುಲ್ ಖಾದರ್ ಮೇರ್ಲ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ತೆಗ್ಗು ತೇರು ಕಲಿಕಾವನವನ್ನು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಉದ್ಘಾಟಿಸಲಿದ್ದಾರೆ. ವಿಸ್ತರಿತ ಆಟದ ಮೈದಾನವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ನೂತನ ಧ್ವಜಕಟ್ಟೆಯನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಗ್ರಂಥಾಲಯವನ್ನು ಮುಖ್ಯ ಸಚೇತಕ ಐವನ್ ಡಿ’ಸೋಜ ಉದ್ಘಾಟಿಸಲಿದ್ದಾರೆ. ಕೃಷಿ ತರಬೇತಿ ಕೇಂದ್ರವನ್ನು ಮೀನಾಕ್ಷಿ ಶಾಂತಿಗೋಡು, ಕಲಿಕಾ ಮನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್, ನಾಮಫಲಕವನ್ನು ಶಾಸಕ ವಿನಯಕುಮಾರ್ ಸೊರಕೆ, ಶೌಚಾಲಯವನ್ನು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಮುಖ್ಯ ದ್ವಾರವನ್ನು ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಅಡಿಕೆ ತೋಟವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಬೊಮ್ಮನಗುಂಡಿ, ವರ್ಲಿ ಚಿತ್ರವನ್ನು ಗ್ರಾ.ಪಂ. ಉಪಾಧ್ಯಕ್ಷ ರಾಧಾಕೃಷ್ಣ ಗೌಡ, ತಡೆಗೋಡೆಯನ್ನು ಗ್ರಾ.ಪಂ. ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಮಕ್ಕಳ ಬಾಲಗೋಕುಲವನ್ನು ಅಮಿತಾ ಎಚ್.ರೈ ಕೂಡೇಲು ಉದ್ಘಾಟಿಸಲಿದ್ದಾರೆ. ಸ್ಮಾರ್ಟ್ ಕ್ಲಾಸನ್ನು ಶಿಕ್ಷಣ ಇಲಾಖೆಯ ದ.ಕ. ಜಿಲ್ಲಾ ಉಪನಿರ್ದೇಶಕ ವೈ. ಶಿವರಾಮಯ್ಯ, ಆವರಣಗೋಡೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎಸ್, ಚಿತ್ರಗಳ ಪ್ರದರ್ಶನವನ್ನು ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪ್ರಿಂಟರನ್ನು ಗ್ರಾ.ಪ. ಸದಸ್ಯ ಎ.ಕೆ. ಜಯರಾಮ ರೈ, ಶಾಲಾ ಬಣ್ಣವನ್ನು ಗ್ರಾ.ಪಂ ಸದಸ್ಯ ಕೆ.ಎಂ. ಹನೀಫ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಜಯಂತ ನಡುಬೈಲು ಅವರಿಗೆ ತೆಗ್ಗು ತೇರು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಗತಿ ಸ್ಟಡಿ ಸೆಂಟರ್‌ನ ಪಿ.ವಿ.ಗೋಕುಲ್‌ನಾಥ್ ಮತ್ತು ಹೇಮಲತಾ ಗೋಕುಲ್‌ನಾಥ್ ದಂಪತಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುವರ್ಣಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಗೌಡ ಎರಕ್ಕಳ, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಗೌಡ, ಸ್ನೇಹ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶುಭಪ್ರಕಾಶ್ ಎರೆಬೈಲು, ಆರ್ಥಿಕ ಸಮಿತಿ ಸಂಚಾಲಕ ಭಾಸ್ಕರ ರೈ ದೇರಾಜೆ, ಶಾಲಾ ಮುಖ್ಯಗುರು ಭಾರತಿ ಸ್ವರಮನೆ ಉಪಸ್ಥಿತರಿದ್ದರು.