×
Ad

ಆಪ್ ಶಾಸಕರ ಅನರ್ಹತೆ : ತಡೆಯಾಜ್ಞೆ ವಿಧಿಸಲು ದಿಲ್ಲಿ ಹೈಕೋರ್ಟ್ ನಕಾರ

Update: 2018-01-24 17:11 IST

ಹೊಸದಿಲ್ಲಿ,ಜ.24 :  ದಿಲ್ಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಸೇರಿದ 20 ಮಂದಿ ಶಾಸಕರನ್ನು ಲಾಭದಾಯಕ ಹುದ್ದೆ ಹೊಂದಿದ್ದಾರೆಂಬ ನೆಲೆಯಲ್ಲಿ ಅನರ್ಹಗೊಳಿಸಿದ ಕೇಂದ್ರದ ಅಧಿಸೂಚನೆಗೆ ತಡೆಯಾಜ್ಞೆ ನೀಡಲು ದಿಲ್ಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಅದೇ ಸಮಯ ಜನವರಿ 29ರ ತನಕ ಉಪ ಚುನಾವಣೆಗೆ ದಿನಾಂಕ ಘೋಷಿಸುವುದೇ ಮುಂತಾದ ಕ್ರಮ ಕೈಗೊಳ್ಳದಂತೆ  ನ್ಯಾಯಾಲಯ ಚುನಾವಣಾ ಆಯೋಗಕ್ಕೆ ನಿರ್ಬಂಧ ವಿಧಿಸಿದೆ.

ತಮ್ಮನ್ನು ಅನರ್ಹಗೊಳಿಸಿರುವ ವಿರುದ್ಧ ಆಪ್ ಶಾಸಕರು ಸಲ್ಲಿಸಿರುವ ಅಪೀಲಿನ ಬಗ್ಗೆ ಪ್ರತಿಕ್ರಿಯಿಸುವಂತೆಯೂ ಜಸ್ಟಿಸ್ ವಿಕ್ರಮ ಬಖ್ರು ಅವರು ಚುನಾವಣಾ ಆಯೋಗ ಮತ್ತು ಕೇಂದ್ರಕ್ಕೆ ಸೂಚಿಸಿದ್ದಾರೆ.

 ಇಪ್ಪತ್ತು ಆಪ್ ಶಾಸಕರ ಅನರ್ಹತೆಗೆ ರಾಷ್ಟ್ರಪತಿ ಜನವರಿ 20ರಂದು ಅಂಕಿತ ಹಾಕಿದ್ದರು.  ಚುನಾವಣಾ ಆಯೋಗ  ಈ ಬಗ್ಗೆ ಶಿಫಾರಸು ಮಾಡಲು ಆಧಾರವಾಗಿ ಉಪಯೋಗಿಸಿದ ಎಲ್ಲಾ ದಾಖಲೆಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ಆದೇಶಿಸಲಾಗಿದೆ.

ಆಪ್ ಸರಕಾರದ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಸಹಿಸಲಾರದೆ  ಕೇಂದ್ರದ ಎನ್‍ಡಿಎ ಸರಕಾರ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News