ಮೂರನೇ ಟೆಸ್ಟ್: ಮೊದಲ ಇನಿಂಗ್ಸ್‌ನಲ್ಲಿ ಭಾರತ 187ಕ್ಕೆ ಆಲೌಟ್

Update: 2018-01-24 16:07 GMT

ಜೋಹಾನ್ಸ್‌ಬರ್ಗ್, ಜ.24: ದಕ್ಷಿಣ ಆಫ್ರಿಕ ವಿರುದ್ಧ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡಿರುವ ಟೀಮ್ ಇಂಡಿಯಾ ಮೂರನೇ ಟೆಸ್ಟ್‌ನಲ್ಲೂ ತನ್ನ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡಿಲ್ಲ.

'ದಿ ವಾಂಡರರ್ಸ್‌' ಸ್ಟೇಡಿಯಂನಲ್ಲಿ ಆರಂಭಗೊಂಡ ಟೆಸ್ಟ್‌ನ ಮೊದಲ ದಿನ ಟೀಮ್ ಇಂಡಿಯಾದ ವಿಕೆಟ್ ತರಗೆಳೆಯಂತೆ ಉದುರಿದೆ. ನಾಯಕ ವಿರಾಟ್ ಕೊಹ್ಲಿ, ಮಧ್ಯಮ ಸರದಿಯ ದಾಂಡಿಗ ಚೇತೇಶ್ವರ ಪೂಜಾರ ಅವರ ಅರ್ಧಶತಕಗಳ ಕೊಡುಗೆ,ಬೌಲರ್ ಭುವನೇಶ್ವರ ಕುಮಾರ್ ಕೊನೆಯಲ್ಲಿ ಹೋರಾಟ ನಡೆಸಿದ ಪರಿಣಾಮವಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 187 ರನ್ ಗಳಿಸಿದೆ.

ವಿರಾಟ್ ಕೊಹ್ಲಿ 54 ರನ್, ಚೇತೇಶ್ವರ ಪೂಜಾರ 50ರನ್, ಭುವನೇಶ್ವರ ಕುಮಾರ್ 30 ರನ್ ಗಳಿಸಿದರು.
ಮುಹಮ್ಮದ್ ಶಮಿ(8), ಅಜಿಂಕ್ಯ ರಹಾನೆ(9), ಮುರಳಿ ವಿಜಯ್(8), ಪಾರ್ಥಿವ್ ಪಟೇಲ್(2) ಒಂದಂಕಿಯ ಕೊಡುಗೆ ನೀಡಿದರು.
ಲೋಕೇಶ್ ರಾಹುಲ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ಖಾತೆ ತೆರೆಯದೆ ನಿರ್ಗಮಿಸಿದರು. ಜಸ್‌ಪ್ರೀತ್ ಬುಮ್ರಾ ಖಾತೆ ತೆರೆಯದೆ ಅಜೇಯರಾಗಿ ಉಳಿದರು.

ದಕ್ಷಿಣ ಆಫ್ರಿಕದ ಕಾಗಿಸೊ ರಬಾಡ 39ಕ್ಕೆ 3, ಮೊರ್ನೆ ಮೊರ್ಕೆಲ್, ಫಿಲ್ಯಾಂಡರ್, ಫೆಹ್ಲುಕ್ವಾವು ತಲಾ 2 ವಿಕೆಟ್ ಮತ್ತು ಗಿಡಿ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News