×
Ad

ಮ್ಯಾನ್ಮಾರ್: ಯುದ್ಧವಿರಾಮಕ್ಕೆ ಮುಂದಾದ ಬಂಡುಕೋರ ಗುಂಪುಗಳು

Update: 2018-01-24 23:15 IST

ಯಾಂಗನ್ (ಮ್ಯಾನ್ಮಾರ್), ಜ. 24: ಮ್ಯಾನ್ಮಾರ್‌ನ ಎರಡು ಜನಾಂಗೀಯ ಬಂಡುಕೋರ ಗುಂಪುಗಳು ಸರಕಾರದೊಂದಿಗೆ ಯುದ್ಧವಿರಾಮ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿವೆ ಎಂದು ಸರಕಾರಿ ಮಾಧ್ಯಮ ಬುಧವಾರ ಹೇಳಿದೆ.

ದಶಕಗಳ ಅವಧಿಯ ಅಂತರ್ಯುದ್ಧವನ್ನು ಕೊನೆಗೊಳಿಸುವುದು ಆಂಗ್ ಸಾನ್ ಸೂ ಕಿ ಸರಕಾರದ ಆದ್ಯತೆಯಾಗಿತ್ತು. ಆದರೆ, ಅವರ ಸರಕಾರ 22 ತಿಂಗಳುಗಳ ಹಿಂದೆ ಅಧಿಕಾರ ವಹಿಸಿಕೊಂಡಾಗಿನಿಂದ ಬಂಡುಕೋರರೊಂದಿಗಿನ ಸಂಘರ್ಷ ತೀವ್ರಗೊಂಡಿತ್ತು.

ಇದೇ ಸಂದರ್ಭದಲ್ಲಿ, ರೊಹಿಂಗ್ಯಾ ಮುಸ್ಲಿಮ್ ಬಿಕ್ಕಟ್ಟು ಕೂಡ ಉಲ್ಬಣಗೊಂಡಿತು. ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಲಕ್ಷಾಂತರ ರೊಹಿಂಗ್ಯಾ ನಿರಾಶ್ರಿತರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದರು ಹಾಗೂ ಸಾವಿರಾರು ಮಂದಿ ಹತರಾದರು.

ನ್ಯೂ ಮೊನ್ ಸ್ಟೇಟ್ ಪಾರ್ಟಿ ಮತ್ತು ಲಹು ಡೆಮಾಕ್ರಟಿಕ್ ಯೂನಿಯನ್ ಎಂಬ ಬಂಡುಕೋರ ಸಂಘಟನೆಗಳು ರಾಷ್ಟ್ರೀಯ ಯುದ್ಧವಿರಾಮ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿವೆ. ಈ ಸಂಘಟನೆಗಳ ನಾಯಕರು ಮಂಗಳವಾರ ರಾಜಧಾನಿ ನೇಪಿಟವ್‌ನಲ್ಲಿ ಸೂ ಕಿ ಮತ್ತು ಸೇನಾ ಪ್ರಧಾನ ದಂಡನಾಯಕ ಸೀನಿಯರ್ ಜನರಲ್ ಮಿನ್ ಆಂಗ್ ಹ್ಲೇಂಗ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ನ್ಯೂ ಲೈಟ್ ಆಫ್ ಮ್ಯಾನ್ಮಾರ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News