ಹೆಜಮಾಡಿ: ಮಹಿಳೆ ಸೇರಿ ನಾಲ್ವರಿಗೆ ಹಲ್ಲೆ, ದೂರು
Update: 2018-01-25 19:43 IST
ಪಡುಬಿದ್ರೆ, ಜ. 25: ಕಟ್ಟಡದ ಕಾಮಗಾರಿಗೆ ಸಂಬಂಧಿಸಿ ಗುಂಪೊಂದು ಮಹಿಳೆ ಸೇರಿ ನಾಲ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಹೆಜಮಾಡಿ ಕೋಡಿ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಹೆಜಮಾಡಿ ಕೋಡಿ ಯಲ್ಲಿ ಎರಡು ಗುಂಪುಗಳ ಮಧ್ಯೆ ಹಲವಾರು ಸಮಯಗಳಿಂದ ಕಟ್ಟಡಕ್ಕೆ ಸಂಬಂಧಿಸಿ ವಿವಾದಗಳು ನಡೆಯುತಿತ್ತು. ಆದರೆ ಬುಧವಾರ ಸಂಜೆ ಪ್ರಜ್ವಲ್, ಮಹೋನ್ ಸಹಿತ 25 ಜನರ ತಂಡವೊಂದು ಶೋಭಾ ಬಂಗೇರಾ, ರತನ್, ಚರಣ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದೆ. ಈ ಬಗ್ಗೆ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರೆ ಪೊಲೀಸರು ತನಿಖೆ ನಡೆಸುತಿದ್ದಾರೆ.