×
Ad

ಜ. 26: ಎಸ್‌ವೈಎಸ್ ವತಿಯಿಂದ ಪ್ರಜಾಪ್ರಭುತ್ವ ಜಾಗೃತಿ ಸಮಾವೇಶ

Update: 2018-01-25 20:06 IST

ಮಂಗಳೂರು, ಜ. 25: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್‌ವೈಎಸ್) ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಪ್ರಜಾಪ್ರಭುತ್ವ ಜಾಗೃತಿ ಸಮಾವೇಶವು  ಜ. 26ರಂದು ಅಪರಾಹ್ನ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಯಲಿದೆ.

ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯನ್ನು ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಉದ್ಘಾಟಿಸಲಿದ್ದಾರೆ.

ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನ್ ಕಾಮಿಲ್ ಮತ್ತು ರಾಜ್ಯ ಇಹ್ಸಾನ್ ದ‌ಅವಾ ಅಧ್ಯಕ್ಷ ಶಾಫಿ ಸ‌ಅದಿ ಬೆಂಗಳೂರು ಮುಖ್ಯ ಪ್ರಭಾಷಣ‌ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News