ಗಣರಾಜ್ಯೋತ್ಸವ: ಉಡುಪಿ ಜಿಲ್ಲಾ ಮಟ್ಟದ ಸೇವಾ ಪ್ರಶಸ್ತಿಗೆ 6 ಮಂದಿ ಆಯ್ಕೆ
ಉಡುಪಿ, ಜ.25: ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆ/ ಸಾಧನೆ ಮಾಡಿದ ರಾಜ್ಯ ಸರಕಾರಿ ನೌಕರರಿಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡುವ ಜಿಲ್ಲಾ ಮಟ್ಟದ ‘ಸರ್ವೋತ್ತಮ ಸೇವಾ ಪರಶಸ್ತಿ’ಗೆ ಈ ಬಾರಿ ಆರು ಮಂದಿ ಸಿಬ್ಬಂದಿ ಗಳನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಅಂಥೋನಿ ಮರಿಯಾ ಇಮಾನ್ಯುವೆಲ್, ಕುಂದಾಪುರದ ತಾಲೂಕು ಆರೋಗ್ಯ ಅಧಿಕಾರಿ ಡಾ.ನಾಗಭೂಷಣ ಉಡುಪ ಎಚ್., ಉಡುಪಿ ತಾಪಂನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಎಸ್.ಹರಿಕೃಷ್ಣ ಶಿವತ್ತಾಯ, ಉಡುಪಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಉಡುಪಿ ಹೋಬಳಿಯ ರಾಜಸ್ವ ನಿರೀಕ್ಷಕ ಸುಧಾಕರ ಶೆಟ್ಟಿ, ಉಡುಪಿ ವಲಯ ಕುಂದಾಪುರ ವಿಭಾಗ ಅಂಬಲಪಾಡಿ ಗಸ್ತು ಅರಣ್ಯ ರಕ್ಷಕ ಎಚ್.ದೇವರಾಜ ಪಾಣ ಇವರು ಈ ಬಾರಿ ಸೇವಾ ಪ್ರಶಸ್ತಿಗೆ ಆಯ್ಕೆಯಾದ ಸರಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾಗಿದ್ದಾರೆ.
ಇವರಿಗೆ ಜ. 26ರಂದು ಉಡುಪಿ ಬೀಡಿನಗುಡ್ಡೆ ಮಹಾತ್ಮಗಾಂಧಿ ಬಯಲು ರಂಗಮಂದಿರದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.