ಗಾಂಜಾ ಸೇವನೆ: ಇಬ್ಬರ ಬಂಧನ
Update: 2018-01-25 22:11 IST
ಮಂಗಳೂರು, ಜ. 25: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ ಕಾವೂರು ಪೊಲೀಸರು ಇಬ್ಬರು ಯುವಕರನ್ನು ಗುರುವಾರ ಬಂಧಿಸಿದ್ದಾರೆ.
ಬೈಕಂಪಾಡಿ ನಿವಾಸಿ ತುಷಾರ್ (26) ಹಾಗೂ ರಾಯಿಕಟ್ಟೆ ನಿವಾಸಿ ವಿಜಯ್ (20) ಬಂಧಿತ ಆರೋಪಿಗಳು.
ಬಂಗ್ರಕೂಳೂರು ಬಳಿಯ ರಾಯಿಕಟ್ಟೆ ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.