ಬೊಕ್ಕಪಟ್ಣದಲ್ಲಿ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
Update: 2018-01-25 22:12 IST
ಮಂಗಳೂರು, ಜ. 25: ತಣ್ಣೀರುಬಾವಿಯ ಬೊಕ್ಕಪಟ್ಣದಲ್ಲಿ ಸೋಮವಾರ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಮೂವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ತಣ್ಣೀರುಬಾವಿ ನಿವಾಸಿ ಶಿವರಾಜ್ ಕರ್ಕೇರ (39) ಅವರನ್ನು ದುಷ್ಕರ್ಮಿಗಳು ಕಡಿದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ತಣ್ಣೀರುಬಾವಿ ನಿವಾಸಿಗಳಾದ ಸುನಿಲ್ ಪೂಜಾರಿ (32), ಧೀರಜ್ (25), ಮೂಲತಃ ಗದಗ ನಿವಾಸಿ, ತಣ್ಣೀರುಬಾವಿಯ ಮಲ್ಲೇಶ ಯಾನೆ ಮಾದೇಶ (23) ಎಂಬವರನ್ನು ಕೊಲೆ ನಡೆದ ದಿನದಂದೇ ಸಿಸಿಬಿ ಪೊಲೀಸರು ಬಂಧಿಸಿದ್ದರು.
ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಪಣಂಬೂರು ಪೊಲೀಸರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಗುರುವಾರಕ್ಕೆ ಕಸ್ಟಡಿಯ ಅವಧಿ ಮುಗಿದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.