ಮುಡಾ ಆಯುಕ್ತರ ವರ್ಗಾವಣೆಗೆ ತಡೆ: ಅಧಿಕಾರ ಸ್ವೀಕರಿಸಲು ಸೂಚನೆ
Update: 2018-01-25 22:15 IST
ಮಂಗಳೂರು, ಜ.25: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ರಾವ್ ಅವರ ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ನೀಡಿದೆ. ಅಲ್ಲದೆ ತಕ್ಷಣ ಅಧಿಕಾರ ಸ್ವೀಕರಿಸಲು ಸೂಚಿಸಿದೆ.
ಶ್ರೀಕಂತ್ ರಾವ್ ಅವರನ್ನು ಡಿ. 29ರಂದು ರಾಜ್ಯ ಸರಕಾರ ವರ್ಗಾವಣೆಗೊಳಿಸಿತ್ತು. ಬಳಿಕ ಪ್ರಶಾಂತ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು.
"ಎ" ಗ್ರೇಡ್ ಅಧಿಕಾರಿಗಳನ್ನು ಕನಿಷ್ಟ 2 ವರ್ಷದೊಳಗೆ ವರ್ಗಾಯಿಸುವಂತಿಲ್ಲ. ಆದರೆ ಶ್ರೀಕಾಂತ್ ರಾವ್ ಮುಡಾ ಆಯುಕ್ತರಾಗಿ 15 ತಿಂಗಳಾಗಿತ್ತಷ್ಟೆ. ಅದರಂತೆ ಶ್ರೀಕಾಂತ್ ರಾವ್ ಜ.16ರಂದು ವರ್ಗಾವಣೆಯನ್ನು ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ ಶ್ರೀಕಾಂತ್ ರಾವ್ ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಮುಡಾ ಆಯುಕ್ತರಾಗಿ ಅಧಿಕಾರದಲ್ಲಿ ಮುಂದುವರಿಯಲು ಸೂಚಿಸಿದೆ.