ಮಂಗಳೂರು: ಕೆಪಿಸಿಸಿಗೆ ಟಿ.ಹೊನ್ನಯ್ಯ ನೇಮಕ
Update: 2018-01-25 22:26 IST
ಮಂಗಳೂರು, ಜ. 25: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಇಲಾಖೆಯ ರಾಜ್ಯ ಸಂಚಾಲಕರಾಗಿ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಟಿ.ಹೊನ್ನಯ್ಯ ಅವರನ್ನು ನೇಮಕ ಮಾಡಲಾಗಿದೆ.
ಇವರಿಗೆ ಉಡುಪಿ ಜಿಲ್ಲೆ ಮತ್ತು ದ.ಕ. ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಘಟಕದ ಉಸ್ತುವಾರಿಯನ್ನು ವಹಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರ ಒಪ್ಪಿಗೆಯಂತೆ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೋಹನ್ ಪಿ.ವಿ. ಅವರ ಅನುಮೋದನೆಯೊಂದಿಗೆ ಕೆಪಿಸಿಸಿ ಪರಿಶಿಷ್ಟ ಇಲಾಖೆಯ ರಾಜ್ಯಾಧ್ಯಕ್ಷ ಎಫ್.ಎಚ್.ಜಕ್ಕಪ್ಪ ಅವರು ಈ ನೇಮಕ ಮಾಡಿದ್ದಾರೆ.