ಮಂಗಳೂರು: ಜ.26ರಂದು ಬಹುಭಾಷಾ ಕವಿಗೋಷ್ಠಿ
ಮಂಗಳೂರು, ಜ.25: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಜ.26ರಂದು ಅಪರಾಹ್ನ 3 ಗಂಟೆಗೆ ನಗರದ ಪುರಭವನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಜರಗಲಿದೆ.
ನಿವೃತ್ತ ಭಾರತೀಯ ಸೇನಾಧಿಕಾರಿ ಕುಸುಮಾಧರ್ ಬಿ.ಕೆ.ಗಣರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಶಬೀನಾ ಬಾನು ವೈ.ಕೆ. ಮಂಗಳೂರು, (ಕನ್ನಡ), ರಾಜ್ ಅಡೂರು ಕಾಸರಗೋಡು (ಶಿವಳ್ಳಿ ತುಳು) ಶ್ರೀವಾಣಿ ಆರ್. ರೈ ಮಂಗಳೂರು (ತುಳು) ಸಾವಿತ್ರಿ ರಮೇಶ್ ಭಟ್, ಸುರತ್ಕಲ್ (ಹಿಂದಿ) ಸಲೀಂ ಮಾಣಿ, ಬಂಟ್ವಾಳ (ಬ್ಯಾರಿ), ಚಾರ್ಲ್ಸ್ ಡಿಸೋಜ ವಾಮಂಜೂರು (ಕೊಂಕಣಿ), ಎ. ಕೆ. ಫೈಝಲ್ ಪುತ್ತೂರು (ಮಲಯಾಳಂ),ಎಂ. ಮಹಮ್ಮದ್ ಮಾರಿಪಳ್ಳ ಫರಂಗಿಪೇಟೆ (ಕನ್ನಡ), ಕರುಣಾಕರ ಬಳ್ಕೂರು ಮಂಗಳೂರು (ಕನ್ನಡ), ವೇದಾ ಶೆಟ್ಟಿ, ಕುಂದಾಪುರ (ಕುಂದಾಪುರ ಕನ್ನಡ) ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ.
ಮಧ್ಯಾಹ್ನ ಪೊಲೀಸ್ ಬ್ಯಾಂಡ್‌ನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ವಿವಿಧ ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ಜರಗಲಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.