ಕಾಬೂಲ್ ಹೊಟೇಲ್ ದಾಳಿಯಲ್ಲಿ ಮೃತರ ಸಂಖ್ಯೆ ಕನಿಷ್ಠ 40
Update: 2018-01-25 23:10 IST
ಕಾಬೂಲ್, ಜ. 25: ಕಳೆದ ವಾರಾಂತ್ಯದಲ್ಲಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಐಶಾರಾಮಿ ಇಂಟರ್‌ಕಾಂಟಿನೆಂಟಲ್ ಹೊಟೇಲ್ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ ಎಂದು ಗುರುವಾರ ಅಧಿಕೃತ ಅಂಕಿಸಂಖ್ಯೆಗಳು ತೋರಿಸಿವೆ.
ಇದು ಈ ಮೊದಲು ಅಧಿಕಾರಿಗಳು ಬಿಡುಗಡೆ ಮಾಡಿರುವ ಸಂಖ್ಯೆಗಿಂತ ದುಪ್ಪಟ್ಟಾಗಿದೆ.
‘‘ಇಂಟರ್‌ಕಾಂಟಿನೆಂಟಲ್ ಹೊಟೇಲ್‌ನಲ್ಲಿ ಸಾವಿಗೀಡಾದ ಅಫ್ಘಾನೀಯರ ಅಂತಿಮ ಸಂಖ್ಯೆ 25’’ ಎಂದು ಆರೋಗ್ಯ ಸಚಿವಾಲಯದ ವಕ್ತಾರ ವಾಹಿದ್ ಮಜ್ರೂಹ್ ಎಎಪ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
‘‘ವಿದೇಶೀಯರ ಸಾವು ನೋವಿನ ಬಗ್ಗೆ ನಮಗೆ ತಿಳಿದಿಲ್ಲ’’ ಎಂದರು ಅವರು ಹೇಳಿದರು.
ದಾಳಿಯಲ್ಲಿ 12 ಅಫ್ಘಾನಿಸ್ತಾನೀಯರು ಗಾಯಗೊಂಡಿದ್ದಾರೆ ಎಂದರು.
ದಾಳಿಯಲ್ಲಿ 15 ವಿದೇಶೀಯರು ಸಾವಿಗೀಡಾಗಿರುವುದನ್ನು ಈಗಾಗಲೇ ಅಧಿಕೃತವಾಗಿ ಘೋಷಿಸಲಾಗಿದೆ. ಹಾಗಾಗಿ, ಶನಿವಾರ ರಾತ್ರಿ ತಾಲಿಬಾನ್ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 40 ಆಗಿದೆ.