×
Ad

ಕಳಾರ: ಕಟ್ಟಡದಲ್ಲಿನ ಸಾಮಗ್ರಿ ತೆರವುಗೊಳಿಸದೆ ಬೆದರಿಕೆ; ದೂರು

Update: 2018-01-25 23:18 IST

ಕಡಬ, ಜ. 25: ಕಡಬ ಗ್ರಾಮದ ಕಳಾರ ನಿವಾಸಿ ಪಿಜಿನ ಎಂಬವರ ಕಟ್ಟಡದಲ್ಲಿ ಸ್ಥಳೀಯ ನಿವಾಸಿ ಸಯ್ಯದ್ ಹುಸೈನ್ ಎಂಬವರು ಇಟ್ಟಿರುವ ಶಾಮಿಯಾನ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ಕೇಳಿಕೊಂಡರು ತೆರವುಗೊಳಿಸದೇ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಕಡಬ ತಾಲೂಕು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಸಂಚಾಲಕ ವಸಂತ ಕುಬಲಾಡಿ ಅವರು ಜಿಲ್ಲಾಧಿಕಾರಿ, ಕಡಬ ತಹಶೀಲ್ದಾರ್ ಹಾಗೂ ಕಡಬ ಗ್ರಾ.ಪಂ.ಗೆ ದೂರು ನೀಡಿದ್ದಾರೆ.

ಕಡಬ ಗ್ರಾಮದ ಪಿಜಿನ ಮುಗೇರ ಅವರು  ಕೃಷಿ ಸಾಮಗ್ರಿಗಳ ಸಂಗ್ರಹಕ್ಕಾಗಿ ಕಟ್ಟಡವನ್ನು ಕಟ್ಟಿಕೊಂಡಿದ್ದು, ಈ ಕಟ್ಟಡವು ಖಾಲಿ ಇದ್ದ ಕಾರಣ  ಸ್ಥಳೀಯ ನಿವಾಸಿ ಸೈಯ್ಯದ್ ಹುಸೇನ್ ಎಂಬವರಿಗೆ ಶಾಮಿಯಾನ ಸಾಮಗ್ರಿಗಳನ್ನು ಇಡಲು ಕೊಟ್ಟಿದ್ದರು ಎನ್ನಲಾಗಿದ್ದು, ಈಗ ಪಿಜಿನ ಮುಗೇರ ಅವರಿಗೆ ಕಟ್ಟಡದ ಅಗತ್ಯವಿರುವುದರಿಂದ ಕಟ್ಟಡದಿಂದ ಸಾಮಗ್ರಿಗಳನ್ನು ತೆರವುಗೊಳಿಸಲು ಹೇಳಿದರೂ ತೆರವುಗೊಳಿಸದೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News