ಪಕ್ಕಲಡ್ಕ: ಜ.26ರಿಂದ ದಫ್ ರಾತೀಬ್ ವಾರ್ಷಿಕ
Update: 2018-01-25 23:25 IST
ಮಂಗಳೂರು, ಜ.25: ಪಕ್ಕಲಡ್ಕದ ರಿಫಾಯಿಯ್ಯ ದಫ್ ಕಮಿಟಿಯ ಆಶ್ರಯದಲ್ಲಿ ನಡೆಯುವ ದಫ್ ರಾತೀಬ್‌ನ 14ನೇ ವಾರ್ಷಿಕೋತ್ಸವ, ಬುರ್ದಾ ಮಜ್ಲಿಸ್, ದಫ್ ಪ್ರದರ್ಶನವು ಜ.26ರಿಂದ 28ರವರೆಗೆ ಪ್ರತೀ ರಾತ್ರಿ 7ರಿಂದ 10:30ರವರೆಗೆ ಪಕ್ಕಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಜ.26ರಂದು ಪಕ್ಕಲಡ್ಕ ಎಂಜೆಎಂ ಮಸೀದಿಯ ಖತೀಬ್ ವಿ.ಎ.ನಝೀರ್ ಅಝ್‌ಹರಿ ಬೊಳ್ಮಿನಾರ್ ಕಾರ್ಯಕ್ರಮ ಉದ್ಘಾಟಿಸುವರು. ಬೊಳ್ಳೂರು ಉಸ್ತಾದ್ ದುಆಗೈಯುವರು. ರಿಫಾಯಿಯ್ಯಾ ದಫ್ ಕಮಿಟಿಯ ಅಧ್ಯಕ್ಷ ಝೈನುದ್ದೀನ್ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭ ದಫ್ ಪ್ರದರ್ಶನ, ರಿಫಾಯಿ ಮಾಲೆ ಆಲಾಪನೆ ನಡೆಯಲಿದೆ.
ಜ.27ರಂದು ಬುರ್ದಾ ಮಜ್ಲಿಸ್ ನಡೆಯಲಿದೆ. ಜ.28ರಂದು ಶೇಖ್ ಮುಸ್ಲಿಮ್ ಉಸ್ತಾದ್ ಕಾಸರಗೋಡು ನೇತೃತ್ವದಲ್ಲಿ ದಫ್ ರಾತೀಬ್ ನಡೆಯಲಿದೆ. ಸಿ.ಟಿ.ಎಂ.ಮುಹಮ್ಮದ್ ಸಲೀಂ ಅಸ್ಸಖಾಫ್ ತಂಙಳ್ ದುಆ ನೇತೃತ್ವ ವಹಿಸುವರು.