ಬಂಟ್ವಾಳ: ಬಿಜೆಪಿ ವತಿಯಿಂದ ‘ಪರಿವರ್ತನಾ ರ್ಯಾಲಿ’
ಬಂಟ್ವಾಳ, ಜ. 25: ಬಂಟ್ವಾಳದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದ್ದು, ಈ ಬಾರಿಯ ವಿಧಾನ ಸಭೆಯಲ್ಲಿ ಕಮಲ ಅರಳುವುದು ನಿಶ್ಚಿತ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಮುಖಂಡ ರಾಜೇಶ್ ನಾಯ್ಕ ನೇತೃತ್ವದಲ್ಲಿ ಜ. 14ರಂದು ಆರಂಭಗೊಂಡಿದ್ದ ‘ಪರಿವರ್ತನಾ ರ್ಯಾಲಿ’ಯ ಬುಧವಾರ ರಾತ್ರಿ ಪೊಳಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, 2014ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರಸ್ ಮುಕ್ತಗೊಳಿಸಲು ದೇಶದ ಜನತೆ ನರೇಂದ್ರ ಮೋದಿಗೆ ಆಶೀರ್ವಾದ ಮಾಡಿದ್ದು, ಕರ್ನಾಟಕದಲ್ಲೂ ಕಾಂಗ್ರೆಸ್ ಮುಕ್ತ ರಾಜ್ಯವಾಗಲಿದೆ ಎಂದರು.
ಕಳೆದ ಚುನಾವಣೆಯ ಬಳಿಕ ರಾಜೇಶ್ ನಾಯಕ್ ಬಂಟ್ವಾಳಕ್ಕೆ ಬಂದೇ ಇಲ್ಲ ಎಂದು ಹೇಳಿಕೆ ನೀಡಿರುವ ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಅವರಿಗೆ ಈ ಸಂದರ್ಭದಲ್ಲಿ ತಿರುಗೇಟು ನೀಡಿದ ಸಂಸದ ನಳಿನ್, ರಾಜೇಶ್ ನಾಯಕ್ ಅವರು ಚುನಾವಣೆ ಸೋತ ಬಳಿಕವೂ ಬಂಟ್ವಾಳ ಕ್ಷೇತ್ರದ ಉದ್ದಗಲಕ್ಕೂ ಸಂಚರಿ ಸಿದ್ದು, ಕಾರ್ಯಕರ್ತರ ಸಂಪರ್ಕದಲ್ಲಿದ್ದು, ಜನರ ಕಷ್ಟ, ಸುಖಗಳಿಗೆ ಸ್ಪಂದಿಸಿ ಪ್ರೀತಿ ಗಳಿಸಿದ್ದಾರೆ. ಈ ಬಗ್ಗೆ ತಿಳಿದುಕೊಳ್ಳದ ಎಂಎಸ್ ಬಂಟ್ವಾಳಕ್ಕೆ ಬಂದೇ ಇಲ್ಲವೇ ಎಂದು ಅವರು ಪ್ರಶ್ನಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಾಲ್ಕು ವರ್ಷದ ಸಾಧನೆಯ ಫಲವಾಗಿ ವಿದೇಶಾಂಗ ನೀತಿಯಲ್ಲಿ ಪರಿವರ್ತನೆಯ ಹೆಜ್ಜೆಯನ್ನಿಟ್ಟಿದ್ದು, ಜಾಗತಿಕ ಮಟ್ಟದಲ್ಲಿ ದೇಶದ ಸಾಧನೆಯನ್ನು ಗುರುಸುವಂತಾಗಿದೆ. ಇದು ಮೋದಿ ಅವರ ಪರಿವರ್ತನೆಯ ಚಾಣಾಕ್ಷತನದ ಗುರಿಯಾಗಿದೆ ಎಂದರು.
ಜಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್, ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ್ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ಜಿ. ಆನಂದ, ಪ್ರ.ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಜಿಲ್ಲಾ ಉಪಾಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಸಮಿತಿ ಸದಸ್ಯ ರೊನಾಲ್ಡ್ ಡಿ’ಸೋಜ, ಜಿಲ್ಲಾ ಎಸ.ಸಿ.ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಕರಿಯಂಗಳ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ, ಪ್ರಮುಖರಾದ
ಪ್ರದೀಪಕುಮಾರ್ ಶೆಟ್ಟಿ ಅಡ್ಯಾರು, ಭಾರತಿ ಚೌಟ,ನಂದರಾಮ ರೈ, ಉಮೇಶ್ ಶೆಟ್ಟಿ, ಮನೋಹರ್ ಕಂಜತ್ತೂರು, ಗೋಪಾಲ ಬಂಗೇರ, ದೇವಿಪ್ರಸಾದ್ ಕಳ್ಳಿಗೆ, ಗೋವಿಂದ ಪ್ರಭು, ದಿನೇಶ್ ಭಂಡಾರಿ, ಉದಯ ಕುಮಾರ್ ರಾವ್,
ಉಪಸ್ಥಿತರಿದ್ದರು. ತಾಪಂ ಸದಸ್ಯ ಯಶವಂತ ಪೂಜಾರಿ ಸ್ವಾಗತಿಸಿ.ಚಂದ್ರಶೇಖರ ರಾವ್ ವಂದಿಸಿದರು. ಕಿಶೋರ್ ಪಲ್ಲಿಪಾಡಿ ನಿರೂಪಿಸಿದರು.