×
Ad

ಜ.30ರ 'ಮಾನವ ಸರಪಳಿ' ಕಾರ್ಯಕ್ರಮ: ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ರಿಗೆ ಆಹ್ವಾನ

Update: 2018-01-25 23:32 IST

ಮಂಗಳೂರು, ಜ. 25: ಸೌಹಾರ್ದ ಕರ್ನಾಟಕಕ್ಕಾಗಿ ಜ.30ರಂದು  ನಡೆಯುವ  "ಮಾನವ ಸರಪಳಿ" ಕಾರ್ಯಕ್ರಮಕ್ಕೆ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರನ್ನು ಭೇಟಿಯಾಗಿ ಆಹ್ವಾನ ನೀಡಲಾಯಿತು.

ಮಂಗಳೂರಿನ ನೆಹರೂ ಮೈದಾನದ ಸುತ್ತ ನಡೆಯಲಿರುವ ಮಾನವ ಸರಪಳಿಯ ಕೊಂಡಿಯಾಗುವಂತೆ ವಿನಂತಿಸಲಾಯಿತು.

ಈ ಸಂದರ್ಭ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮಾನವ ಬಂಧುತ್ವ ವೇದಿಕೆಯ ವಿಲ್ಫ್ರೆಡ್ ಡಿಸೋಜ, ಸಮುದಾಯದ ವಾಸುದೇವ ಉಚ್ಚಿಲ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಹನೀಫ್ ಹಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News