ಜ.28: ರಾಜಶೇಖರ್ ಕೋಟ್ಯಾನ್‌ಗೆ ಸನ್ಮಾನ
ಉಡುಪಿ, ಜ.26: ರಾಜ್ಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕರಾದ ರಾಜಶೇಖರ್ ಕೋಟ್ಯಾನ್ ಅವರಿಗೆ ಅವರ ವಿಶೇಷ ಸಾಧನೆ ಹಾಗೂ ಸಮಾಜ ಸೇವೆಗಾಗಿ ಡಾ.ರಾಜಶೇಖರ್ ಕೋಟ್ಯಾನ್ ಅಭಿಮಾನಿ ಬಳಗದ ವತಿಯಿಂದ ಜ.28ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಸನ್ಮಾನಿಸಲಾಗುವುದು ಎಂದು ಉಡುಪಿ ತಾಪಂ ಸದಸ್ಯ ದಿನಕರ ಹೇರೂರು ತಿಳಿಸಿದ್ದಾರೆ.
ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಾರ್ಯಕ್ರಮವನ್ನು ಬೆಳಗ್ಗೆ 9:30ಕ್ಕೆ ರಾಜ್ಯಸಭಾ ಸದಸ್ಯ, ಹಿರಿಯ ಕಾಂಗ್ರೆಸಿಗ ಆಸ್ಕರ್ ಫೆರ್ನಾಂಡೀಸ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ ಮಧ್ವರಾಜ್ ಉಪಸ್ಥಿತರಿರುವರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಅಭಿನಂದನಾ ಭಾಷಣ ಮಾಡುವರು ಎಂದರು.
ಶಾಸಕರಾದ ವಿನಯಕುಮಾರ ಸೊರಕೆ, ಕೆ.ಗೋಪಾಲ ಪೂಜಾರಿ, ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಮೋಟಮ್ಮ, ಯು.ಆರ್.ಸಭಾಪತಿ, ಗೋಪಾಲ ಭಂಡಾರಿ, ಎಂ.ಎ.ಗಫೂರ್ ಜಿ.ಎ.ಬಾವಾ, ರಾಕೇಶ್ ಮಲ್ಲಿ ಮುಂತಾದವರು ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಸುದೇಶ್ ಹೆಗ್ಡೆ ಶಿರಿಯಾರ, ವೆಂಕಟರಮಣ ಶೆಟ್ಟಿ, ಮಾಜಿ ತಾಪಂ ಸದಸ್ಯ ಸಂಜೀವ ಪೂಜಾರಿ, ಸಂತೋಷ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.