×
Ad

ಗಣರಾಜೋತ್ಸವ: ಕೋಮು ಸೌಹಾರ್ದ ಸಾರುವ 'ಮ್ಯಾರಥಾನ್ ಓಟ'

Update: 2018-01-26 21:55 IST

ಬಂಟ್ವಾಳ, ಜ.26: ಪಾಟ್ರಕೋಡಿ ಇಂಡಿಯನ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಪಾಟ್ರಕೋಡಿ ಹಳೆ ವಿದ್ಯಾರ್ಥಿ ಸಂಘ ಇದರ ಜಂಟಿ ಆಶ್ರಯದಲ್ಲಿ ಗಣರಾಜೋತ್ಸವದ ಅಂಗವಾಗಿ "ಆರೋಗ್ಯಕ್ಕಾಗಿ ಓಟ" ಎಂಬ ಧ್ಯೇಯ ವಾಕ್ಯದೊಂದಿಗೆ ಕೋಮು ಸೌಹಾರ್ದ ಸಾರುವ "ಮ್ಯಾರಥಾನ್ ಓಟ" ಶುಕ್ರವಾರ ಬೆಳಗ್ಗೆ ಕೊಡಾಜೆ ಜಂಕ್ಷನ್‌ನಿಂದ ಪಾಟ್ರಕೋಡಿಯವರೆಗೆ ನಡೆಯಿತು.

ಕೆದಿಲ ಗ್ರಾಪಂ ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಶೆಟ್ಟಿ ಕಲ್ಲಾಜೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟ್ವಾಳ ತಾಪಂ ಸದಸ್ಯ ಹಾಜಿ ಆದಂ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಕೆದಿಲ ಗ್ರಾಪಂ ಮಾಜಿ ಸದಸ್ಯರಾದ ರಾಬರ್ಟ್ ಲಸ್ರಾದೋ, ಹಮೀದ್ ಮೆಜಸ್ಟಿಕ್, ಸದಸ್ಯರಾದ ಸುದರ್ಶನ್ ಕುದುಂಬ್ಲಾಡಿ, ಉಮೇಶ್ ಮುರುವ, ನೆಟ್ಲಮುಡ್ನೂರು ಗ್ರಾಪಂ ಸದಸ್ಯ ಲತೀಫ್ ನೇರಳಕಟ್ಟೆ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಪರಮೇಶ್ವರ ನಾವಡ ಭಟ್, ಕೆದಿಲ ಸೇವಾ ಸಹಕಾರಿ ಸಂಘದ ನಿರ್ದೇಶಕ ಪ್ರವೀನ್ ರೈ ಕಲ್ಲಾಜೆ, ಅಹ್ಮದ್ ಮಾಸ್ಟರ್ ಪಾಟ್ರಕೋಡಿ, ಶಾಲಾ ಮುಖ್ಯೋಪಾಧ್ಯಾಯ ಉಮ್ಮರಗಿ ಶರಣಪ್ಪ, ಹರೀಶ್ ಕುದುಂಬ್ಲಾಡಿ, ಕೆ.ಪಿ.ಮುಹಮ್ಮದ್ ಪಾಟ್ರಕೋಡಿ, ಇಬ್ರಾಹಿಂ ಬಾತಿಶ್, ಪಾಟ್ರಕೋಡಿ ಇಂಡಿಯನ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸಿರಾಜ್ ಕೆತ್ತೆಪುಳಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಝಾಮ್ ಬಿ.ಎಚ್., ಕೆ. ಖಾಸಿಂ ಪಾಟ್ರಕೋಡಿ, ತಾಜುದ್ದೀನ್ ಬಯಬೆ, ಅಝೀಂ ಪಾಟ್ರಕೋಡಿ, ಲತೀಫ್ ಕೋಡಿ, ನೌಶಾದ್ ಕೋಡಿ, ಕಲಂದರ್ ಶಾಫಿ ಪಾಟ್ರಕೋಡಿ ಮತ್ತಿತರರು ಉಪಸ್ಥಿತರಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಸ್. ಶರೀಫ್ ಸ್ವಾಗತಿಸಿ, ಉನೈಸ್ ಪಾಟ್ರಕೋಡಿ ವಂದಿಸಿದರು. ನಿಶಾದ್ ಪಾಟ್ರಕೋಡಿನಿರೂಪಿಸಿದರು.

ಫಲಿತಾಂಶ: 18-35ರ ವಿಭಾಗ: ಬಿ.ಎಂ.ಕೆ ಅಝೀಝ್ ಬಯಬೆ ಪ್ರಥಮ, ಅಲಿ ಹೈದರ್ ಪಾಟ್ರಕೋಟಿ ದ್ವಿತೀಯ, ನಿಝಾಮ್ ಕೋಡಿ ತೃತೀಯ.

ಹಿರಿಯ ವಿಭಾಗ: ಹಮೀದ್ ಬಸೋಟು ಪ್ರಥಮ, ಉಸ್ಮಾನ್ ಮೆಹಬೂಬ್ ದ್ವಿತೀಯ, ಸಾಜಿದ್ ಮಿತ್ತಪಡ್ಪು ತೃತೀಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News