ಜ. 27: ಇಖ್ರಾ ಅರೆಬಿಕ್ ಸ್ಕೂಲ್ ನಲ್ಲಿ ಅಂತರ್ ಶಾಲಾ ಮಟ್ಟದ ಹಿಫ್‌ಝ್ ಸ್ಪರ್ಧೆ
Update: 2018-01-26 21:58 IST
ಮಂಗಳೂರು, ಜ. 26: ನಗರದ ವಾಸ್‌ಲೇನ್‌ನಲ್ಲಿರುವ ಇಖ್ರಾ ಅರೆಬಿಕ್ ಸ್ಕೂಲ್ ವತಿಯಿಂದ ಜ. 27ರಂದು ಬೆಳಗ್ಗೆ 9:30 ರಿಂದ ಸಂಜೆ 3:30ರ ವರೆಗೆ ದ.ಕ. ಜಿಲ್ಲಾ ಅಂತರ್ ಶಾಲಾ ವಿದ್ಯಾರ್ಥಿಗಳ ಹಿಫ್‌ಝ್ ಸ್ಪರ್ಧೆಯನ್ನು ಸ್ಕೂಲ್‌ನಲ್ಲಿ ಆಯೋಜಿಸಲಾಗಿದೆ.
ಸಂಜೆ 4:30 ರಿಂದ 6:30ರವರೆಗೆ ವಾಸ್‌ಲೇನ್‌ನಲ್ಲಿರುವ ಮಸ್ಜಿದುಲ್ ಇಹ್ಸಾನ್‌ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನ ಯಹ್ಯಾ ತಂಙಳ್ ಮದನಿ, ನಗರದ ಕಚ್ಚಿ ಮೆಮನ್ ಮಸೀದಿಯ ಖತೀಬ್ ಮೌಲಾನ ಸೈಯದ್ ಶುಐಬ್ ಹುಸೈನಿ ನದ್ವಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.