ಇಖ್ರಾ ಅರೆಬಿಕ್ ಸ್ಕೂಲ್ ನಲ್ಲಿ ಸಂಭ್ರಮದ ಗಣರಾಜ್ಯೋತ್ಸವ
Update: 2018-01-26 22:31 IST
ಮಂಗಳೂರು, ಜ. 26: ನಗರದ ಇಖ್ರಾ ಅರೆಬಿಕ್ ಸ್ಕೂಲ್ ನಲ್ಲಿ ಶುಕ್ರವಾರ ಸಂಭ್ರಮದ ಗಣರಾಜ್ಯೋತ್ಸವ ಆಚರಿಸಲಾಯಿತು.
ಖ್ಯಾತ ಮೂತ್ರ ತಜ್ಞರಾದ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿ, ಸದಾ ವಿದ್ಯಾರ್ಥಿಯಾಗಿ ಉಳಿಯಿರಿ, ಕಾಲಕ್ಕನುಗುಣವಾಗಿ ಬದಲಾವಣೆ ತರಬೇಕು, ತ್ಯಾಗ ಮನೋಭಾವವನ್ನು ಬೆಳೆಸಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿರಿ ಎಂದು ಹೇಳಿದರು.
ಸಮಾರಂಭದಲ್ಲಿ ಮಂಗಳೂರಿನ ಖ್ಯಾತ ವೈದ್ಯ ಡಾ. ಮಹಮ್ಮದ್ ಇಸ್ಮಾಯೀಲ್, ಕಚ್ಚೀ ಮೇಮನ್ ಮಸೀದಿಯ ಖತೀಬ್ ಮೌಲಾನಾ ಶುಐಬ್ ಹುಸೈನಿ ನದ್ವೀ, ಪ್ರಾಂಶುಪಾಲರಾದ ಮೌ. ಸಾಲಿಮ್ ನದ್ವೀ, ನಝೀರ್, ಮುಸ್ತಫಾ ಕೆಂಪಿ ಹಾಗು ಇತರರು ಉಪಸ್ಥಿತರಿದ್ದರು.