×
Ad

ಮಂಗಳೂರು: ಜ್ಯೂಸ್-ಐಸ್‌ಕ್ರೀಂ ಪಾರ್ಲರ್ ‘ಫಾರ್ಮ್ ಕೆಫೆ’ ಶುಭಾರಂಭ

Update: 2018-01-26 23:25 IST

ಮಂಗಳೂರು, ಜ.26: ಎವೆರಿಡೆ ಸುಪರ್ ಮಾರ್ಕೆಟ್‌ನ ಸಹ ಸಂಸ್ಥೆಯಾದ ಜ್ಯೂಸ್-ಐಸ್‌ಕ್ರೀಂ ಪಾರ್ಲರ್‌ನ ‘ಫಾರ್ಮ್ ಕೆಫೆ’ ಶುಕ್ರವಾರ ಶುಭಾರಂಭಗೊಂಡಿತು.

ನಗರದ ಬೆಂದೂರ್‌ವೆಲ್‌ನ ಎಸ್ಸೆಲ್ ವಿಲಿಕಾನ್‌ನಲ್ಲಿ ಶಾಸಕ ಜೆ.ಆರ್.ಲೋಬೊ ‘ಫಾರ್ಮ್ ಕೆಫೆ’ಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬೆಳೆಯುತ್ತಿರುವ ಮಂಗಳೂರು ನಗರದ ಹಿರಿಮೆಯನ್ನು ಹೆಚ್ಚಿಸುವ ಸಲುವಾಗಿ ಆರಂಭಗೊಂಡಿರುವ ‘ಫಾರ್ಮ್ ಕೆಫೆ’ಯು ವಿನೂತನ ಮಾದರಿ ಪಾರ್ಲರ್ ಆಗಿದೆ. ರೈತರಿಗೆ ಪರೋಕ್ಷವಾಗಿ ಸಹಕರಿಸುವ ಈ ಸಂಸ್ಥೆಯಲ್ಲಿ 90 ಬಗೆಯ ಜ್ಯೂಸ್ ಮತ್ತು 300 ಬಗೆಯ ಐಸ್‌ಕ್ರೀಂ ಇದೆ. ಮಂಗಳೂರಿಗರು ಗುಣಮಟ್ಟವನ್ನು ಬಯಸುತ್ತಾರೆ ಎಂಬುದಕ್ಕೆ ಈ ಪಾರ್ಲರ್ ಸಾಕ್ಷಿಯಾಗಿದೆ ಎಂದರು.

 ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್ ಶುಭ ಹಾರೈಸಿದರು. ಈ ಸಂದರ್ಭ ಉದ್ಯಮಿ ಫಕ್ರುದ್ದೀನ್, ಸಂಸ್ಥೆಯ ಪಾಲುದಾರರಾದ ಅಜ್ಮಲ್, ಡೇವಿಡ್, ಹಾರಿಸ್, ಕಿರಣ್, ಆಬಿದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News