ಉಡುಪಿ: ಪ್ರೌಢಶಾಲಾ, ಪ.ಪೂ. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ
ಉಡುಪಿ, ಜ.27: ಎಂಜಿಎಂ ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಬಾರಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರಶಾಸ್ತ್ರಿ ಸ್ಮರಣಾರ್ಥ ಉಡುಪಿ ಜಿಲ್ಲಾ ಪ್ರೌಢ ಶಾಲಾ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಜ.30ರ ರಂದು ಬೆಳಿಗ್ಗೆ 9:30 ರಿಂದ ಎಂಜಿಎಂ ಕಾಲೇಜಿನ ಗೀತಾಂಜಲಿ ಯಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಶಾಲಾ ಗುರುತು ಚೀಟಿ ಅಥವಾ ಪತ್ರದೊಂದಿಗೆ ಅಂದು ಬೆಳಿಗ್ಗೆ 9:30 ಸ್ಥಳದಲ್ಲಿ ಹಾಜರಿದ್ದು, ಉಚಿತವಾಗಿ ಹೆಸರು ನೋಂದಾಯಿಸಿ ಸ್ಪರ್ಧೆ ಯಲ್ಲಿ ಭಾಗವಹಿಸಬಹುದು. ಪ್ರವೇಶ ಶುಲ್ಕವಿಲ್ಲ. ಸ್ಪರ್ಧಾ ಸಮಯ: ಬೆಳಿಗ್ಗೆ 10ರಿಂದ 11:30ರವರೆಗೆ. ಸಂಘಟಕರು ಚಿತ್ರ ಬಿಡಿಸಲು ಹಾಳೆಯನ್ನು ಒದಗಿಸಿಲಿದ್ದು, ಉಳಿದ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು.
ಸ್ಪರ್ಧಾ ವಿಷಯ: ಮಹಾತ್ಮಾಗಾಂಧೀಜಿ ಅವರ ಯಾವುದೇ ಜೀವನ ಘಟನೆ ಅಥವಾ ಸ್ವಾತಂತ್ರ ಹೋರಾಟದ ಯಾವುದೇ ಘಟನೆ. ಸ್ಪರ್ಧಾ ವಿಜೇತರಿಗೆ ರೂ.1000, 750 ಹಾಗೂ 500ರೂ.ಗಳನ್ನು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ: 9480575783 (ವೆಂಕಟೇಶ್) ಹಾಗೂ 9480531860 (ಸುಬ್ರಾಯ ಶಾಸ್ತ್ರಿ) ಇವರನ್ನು ಸಂಪರ್ಕಿಸುವಂತೆ ಸಂಘಟಕರ ಪ್ರಕಟಣೆ ತಿಳಿಸಿದೆ.