×
Ad

ಇಖ್ರಾ ಅರೆಬಿಕ್ ಸ್ಕೂಲ್: ದ.ಕ. ಜಿಲ್ಲಾ ಅಂತರ್ ಶಾಲಾ ವಿದ್ಯಾರ್ಥಿಗಳ ಹಿಫ್‌ಝ್ ಸ್ಪರ್ಧೆ

Update: 2018-01-27 20:48 IST

ಮಂಗಳೂರು, ಜ. 27: ನಗರದ ವಾಸ್‌ಲೇನ್‌ನಲ್ಲಿರುವ ಇಖ್ರಾ ಅರೆಬಿಕ್ ಸ್ಕೂಲ್ ವತಿಯಿಂದ ಶನಿವಾರ ದ.ಕ. ಜಿಲ್ಲಾ ಅಂತರ್ ಶಾಲಾ ವಿದ್ಯಾರ್ಥಿಗಳ ಹಿಫ್‌ಝ್ ಸ್ಪರ್ಧೆಯನ್ನು ಸ್ಕೂಲ್‌ನಲ್ಲಿ ನಡೆಯಿತು.

ಪವಿತ್ರ ಕುರ್‌ಆನ್‌ನ 30 ಕಾಂಡಗಳ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಒಟ್ಟು 24 ಮಂದಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪವಿತ್ರ ಕುರ್‌ಆನ್ 30 ಕಾಂಡಗಳ ಹಿಫ್ಝ್ ಸ್ಪರ್ಧೆಯಲ್ಲಿ ಹುದಾ ಸ್ಕೂಲ್‌ನ ಶಾವೆಝ್ ಪ್ರಥಮ, ಕುರ್‌ಆನ್‌ನ ಒಂದರಿಂದ 20ವರೆಗಿನ ಕಾಂಡದ ಹಿಝ್ಫ್ ಸ್ಪರ್ಧೆಯಲ್ಲಿ ಇಖ್ರಾ ಸ್ಕೂಲ್‌ನ ಉಮರ್ ಅಬ್ದುಲ್ಲಾಹ್ ಪ್ರಥಮ ಹಾಗೂ ಒಂದರಿಂದ 10 ಕಾಂಡದವರೆಗಿನ ಹಿಫ್ಝ್ ಸ್ಪರ್ಧೆಯಲ್ಲಿ ಇಖ್ರಾ ಸ್ಕೂಲ್ ಮುಹಮ್ಮದ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಸಂಜೆ ವಾಸ್‌ಲೇನ್‌ನಲ್ಲಿರುವ ಮಸ್ಜಿದುಲ್ ಇಹ್ಸಾನ್‌ನಲ್ಲಿ ಸಮಾರೋಪ ಸಮಾರಂಭ ನಡೆಯಿತು. ಬೋಳಂಗಡಿ ಹವ್ವಾ ಮಸೀದಿಯ ಖತೀಬ್ ಮೌಲಾನ ಯಹ್ಯಾ ತಂಙಳ್, ನಗರದ ಕಚ್ಚಿ ಮೆಮನ್ ಮಸೀದಿಯ ಖತೀಬ್ ಮೌಲಾನ ಸೈಯದ್ ಶುಐಬ್ ಹುಸೈನಿ ನದ್ವಿ, ಭಟ್ಕಳದ ಜಾಮಿಯಾ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯ ಅಧ್ಯಾಪಕ ಇರ್ಫಾನ್ ನದ್ವಿ, ಇಖ್ರಾ ಅರೆಬಿಕ್ ಸ್ಕೂಲ್‌ನ ಪ್ರಾಂಶುಪಾಲ ಸಾಲಿಂ ನದ್ವಿ, ಹನೀಫ್ ಹಾಜಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕುರ್‌ಆನ್ ಹಿಫ್ಝ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದ ಇಖ್ರಾ ಸ್ಕೂಲ್‌ನ ತೌಹೀದುರ್ರಹ್ಮಾನ್ ಅವರನ್ನು ಸನ್ಮಾನಿಸಲಾಯಿತು.

ತೌಹೀದುರ್ರಹ್ಮಾನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News