ಕುಂದಾಪುರ: ಕೋಡಿಗೆ ಸರಕಾರಿ ಬಸ್ ಸೇವೆ ಆರಂಭ
ಕುಂದಾಪುರ, ಜ.27: ಕೋಡಿ ಗ್ರಾಮಸ್ಥರ ಸತತ ಬೇಡಿಕೆಯ ಮೇರೆಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವತಿಯಿಂದ ಇಂದು ಆರಂಭಿಸಲಾದ ಕುಂದಾಪುರ-ಕೋಡಿ ಬಸ್ ಸೇವೆಯನ್ನು ಕೋಡಿ ಶ್ರೀ ಚಕ್ರೇಶ್ವರಿ ದೇವಸ್ಥಾನದ ವಠಾರದಲ್ಲಿ ಕೋಡಿಯ ಹಿರಿಯ ನಾಗರಿಕರಾದ ಕೋಡಿ ಮಾಧವ ಎಂ. ಪೂಜಾರಿ ಉದ್ಘಾಟಿಸಿದರು.
ಈ ಸಂದರ್ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕೋಟೇಶ್ಬರ ಜಿಪಂ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ಈ ಬಸ್ ಸೇವೆಯಿಂದ ಕೋಡಿ ಗ್ರಾಮದ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಿಕೊಟ್ಟಂತಾಗಿದೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಸರಕಾರಿ ಬಸ್ ವ್ಯವಸ್ಥೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೈಂದೂರು ಶಾಸಕ ಹಾಗೂ ಕೆಎಸ್ಸಾರ್ಟಿಸಿ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕೋಡಿ ಶಂಕರ ಪೂಜಾರಿ, ಮಂಜು ಬಿಲ್ಲವ, ಅಬ್ದುಲ್ಲಾ ಕೋಡಿ, ಪುರಸಭಾ ಸದಸ್ಯ ಸಂದೀಪ್ ಪೂಜಾರಿ, ಸಾರಿಗೆ ಸಂಸ್ಥೆ ಮುಖ್ಯಸ್ಥ ಸತ್ಯರಾಜ್, ತಿಮ್ಮಪ್ಪ ಖಾರ್ವಿ, ಬಾಸ್ಕರ ಪುತ್ರನ್, ಜಯ ಮೊಗವೀರ, ಗಂಗಾಧರ ಪೂಜಾರಿ, ಮೋಹನದಾಸ್ ಖಾರ್ವಿ, ವಿಠಲ ಪೂಜಾರಿ, ಸುಧಾಕರ ಪೂಜಾರಿ, ಮಹೇಶ್ ಶೆಣೈ ಅಲ್ಲದೆ ಕೋಡಿ ಹಾಗೂ ಹಂಗಳೂರು ಗ್ರಾಮಸ್ಥರು ಉಪಸ್ಥಿತರಿದ್ದರು.
ಮಾಜಿ ಪುರಸಬಾ ಸದಸ್ಯ ಸಂಜೀವ ಪೂಜಾರಿ ಸ್ವಾಗತಿಸಿ, ಕೋಡಿ ಸುನಿಲ್ ಪೂಜಾರಿ ವಂದಿಸಿದರು.