ಟ್ರಂಪ್ ಆಡಳಿತದಿಂದ 18 ಲಕ್ಷ ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ಪ್ರಸ್ತಾಪ

Update: 2018-01-27 16:25 GMT

ವಾಶಿಂಗ್ಟನ್, ಜ. 27: ಮಕ್ಕಳಿರುವಾಗ ಅಮೆರಿಕಕ್ಕೆ ಅಕ್ರಮವಾಗಿ ಕರೆತರಲಾದ ಸುಮಾರು 18 ಲಕ್ಷ ಅಕ್ರಮ ವಲಸಿಗರು ಪೌರತ್ವ ಪಡೆಯಲು ಅವಕಾಶ ನೀಡುವ ನೂತನ ಪ್ರಸ್ತಾಪವೊಂದನ್ನು ಶ್ವೇತಭವನ ಮುಂದಿಟ್ಟಿದೆ. ಇದಕ್ಕೆ ಪ್ರತಿಯಾಗಿ, ಗಡಿ ಗೋಡೆ ಮತ್ತು ಕುಟುಂಬ ಆಧರಿತ ವಲಸೆ ಸೇರಿದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹಲವು ಕಠಿಣ ಯೋಜನೆಗಳಿಗೆ ಹಣಕಾಸು ಲಭಿಸಲಿದೆ.

ಸುಮಾರು 6.9 ಲಕ್ಷ ಅಕ್ರಮ ವಲಸಿಗರ ಭವಿಷ್ಯದ ಬಗ್ಗೆ ಈಗ ಚರ್ಚೆ ನಡೆಯುತ್ತಿರುವುದನ್ನು ಸ್ಮರಿಸಬಹುದಾಗಿದೆ. ಈ ಪೈಕಿ ಸುಮಾರು 8,000 ಮಂದಿ ಭಾರತೀಯರು. ನೂತನ ಪ್ರಸ್ತಾವದನ್ವಯ, ಇದರ ದುಪ್ಪಟ್ಟಿಗಿಂತಲೂ ಅಧಿಕ ವಲಸಿಗರಿಗೆ ಪೌರತ್ವ ಲಭಿಸಲಿದೆ.

ಇವರಿಗೆ ಪೌರತ್ವ ನೀಡಬೇಕೆನ್ನುವುದು ಡೆಮಾಕ್ರಟಿಕ್ ಪಕ್ಷದ ಸಂಸದರ ಪ್ರಮುಖ ಬೇಡಿಕೆಯಾಗಿತ್ತು. ತಮ್ಮ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸಿ ಡೆಮಾಕ್ರಟಿಕ್ ಸಂಸದರು ಕಳೆದ ವಾರ ಹಂಗಾಮಿ ಖರ್ಚು ಮಸೂದೆಗೆ ಅಂಗೀಕಾರ ನೀಡಿರಲಿಲ್ಲ. ಹಾಗಾಗಿ, ಫೆಡರಲ್ ಸರಕಾರ ಮೂರು ದಿನಗಳ ಕಾಲ ಬಂದ್ ಆಗಿತ್ತು.

ಇದಕ್ಕೆ ಪ್ರತಿಯಾಗಿ, ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸುವುದಕ್ಕಾಗಿ ‘ಭದ್ರತೆ ನಿಧಿ’ಯಾಗಿ 25 ಬಿಲಿಯ ಡಾಲರ್ ನೀಡಬೇಕೆಂದು ಟ್ರಂಪ್ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News