ಜುಗಾರಿ: 11 ಮಂದಿಯ ಬಂಧನ
ಉಡುಪಿ, ಜ. 27: ಮೂಡುಸಗ್ರಿ ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವ ಸ್ಥಾನ ಬಳಿಯ ಹಾಡಿಯಲ್ಲಿ ಜ.26ರಂದು ಸಂಜೆ ವೇಳೆ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕರಂಬಳ್ಳಿಯ ಲೋಲಾಕ್ಷ ದಾಸ್ (32), ಉಮರ್ (50), ರಾಘವೇಂದ್ರ ದೇವಾಡಿಗ (29), ಪಡುಸಗ್ರಿಯ ನಿತಿನ್ ಪೂಜಾರಿ (30), ಸಂತೆಕಟ್ಟೆಯ ಮುಸ್ತಾಫ್ (42), ಗುಂಡಿಬೈಲಿನ ಪ್ರಕಾಶ್ ಪೂಜಾರಿ (40) ಎಂಬವರನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿ, 14,880 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಮಲ್ಪೆ: ಜ.26ರಂದು ರಾತ್ರಿ ವೇಳೆ ಕೊಳ ರಸ್ತೆಯ ಬಳಿ ಸಾಯಿ ಕಿಶನ್ ಐಸ್ ಪ್ಯಾಕ್ಟರಿ ಬಳಿ ಇಸ್ಪಿಟು ಜುಗಾರಿ ಆಡುತ್ತಿದ್ದ ಬಳ್ಳಾರಿಯ ಯಂಕ ನಾಯ್ಕ (33), ಕೊಪ್ಪಳದ ಶರಣ (23), ಪರಶುರಾಮ್ (27) ಎಂಬವರನ್ನು ಮಲ್ಪೆ ಪೊಲೀಸರು ಬಂಧಿಸಿ, 8050 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಮಲ್ಪೆ ವಡಬಾಂಡೇಶ್ವರ- ಬೈಲಕೆರೆ ರಸ್ತೆಯಲ್ಲಿನ ನಾಗಭನದ ಬಳಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಉದ್ದಿನಹಿತ್ಲುವಿನ ದಿವಾಕರ(38) ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜ.27ರಂದು ಮಧ್ಯಾಹ್ನ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹವಾಲ್ದಾರ್‌ಬೆಟ್ಟು ಎಂಬಲ್ಲಿ ಸುಜಿತ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿ, 1270 ರೂ. ನಗದು ವಶಪಡಿಸಿಕೊಂಡಿದ್ದಾರೆ.