ಜಾನುವಾರು ವಧೆ: ಇಬ್ಬರ ಸೆರೆ
Update: 2018-01-27 22:30 IST
ಕಾಪು, ಜ.27: ಮಲ್ಲಾರ ಗ್ರಾಮದ ಗುಡ್ಡೆಕೇರಿ ಎಂಬಲ್ಲಿರುವ ಮನೆಯೊಂದರಲ್ಲಿ ಶನಿವಾರ ಬೆಳಗ್ಗೆ ಅಕ್ರಮವಾಗಿ ದನ ಕಡಿದು ಮಾಂಸ ಮಾಡುತ್ತಿದ್ದರೆನ್ನಲಾದ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗುಡ್ಡೇಕೇರಿಯ ಮಹಮ್ಮದ್ ಯೂನೂಸ್ (48) ಹಾಗೂ ಫಯಾಝ್ (30) ಎಂದು ಗುರುತಿಸಲಾಗಿದೆ. ಇವರಿಂದ ಸುಮಾರು 20 ಕೆ.ಜಿ. ದನದ ಮಾಂಸ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.