×
Ad

ಜ.28: ಅಲ್ ಹಿದಾಯ ಮಸೀದಿಯ ಮೇಲಂತಸ್ತು ಉದ್ಘಾಟನೆ

Update: 2018-01-27 22:34 IST

ಮಂಗಳೂರು, ಜ. 27: ಹಿದಾಯತ್ ನಗರದ ಅಲ್ ಹಿದಾಯ ಜುಮಾ ಮಸೀದಿ ವತಿಯಿಂದ ಜ.28ರಂದು ಮಗ್ರಿಬ್ ನಮಾಝಿನ ಬಳಿಕ ಮಸೀದಿಯ ಮೇಲಂತಸ್ತಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಮೆಹ್‌ಫಿಲೇ ತೈಬಾ, ಶೈಖ್ ರಿಫಾಯೀ ಅನುಸ್ಮರಣೆ ನಡೆಯಲಿದೆ.

ಕೆ.ಸಿ.ರೋಡ್ ಸಿಟಿಎಮ್ ಸಲೀಂ ಅಸ್ಸಖಾಫ್ ತಂಙಳ್ ದುಆ ಮಾಡಲಿದ್ದು, ಕೆ.ಪಿ.ಹುಸೈನ್ ಸಅದಿ ನೇತೃತ್ವ ವಹಿಸಲಿದ್ದಾರೆ. ಎನ್.ಎಸ್. ಉಮರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು, ಖತೀಬ್ ಅಹ್ಮದ್ ಕಬೀರ್ ಸಅದಿ ಉಳ್ಳಾಲ ಭಾಗವಹಿಸಲಿದ್ದಾರೆ.

ವೇದಿಕೆಯಲ್ಲಿ ಸಚಿವ ಯು.ಟಿ. ಖಾದರ್, ಸದರ್ ಮುಅಲ್ಲಿ ಅಬ್ದುಲ್ ಅಝೀಝ್ ಸಖಾಫಿ, ಮುಅಲ್ಲಿಂ ಅಶ್ರಫ್ ಅಮ್ಜದಿ, ಕಾರ್ಯದರ್ಶಿ ಝುಬೈರ್ ಝುಹುರಿ, ಎಸ್.ಎಸ್.ಎಫ್ ಹಿದಾಯತ್ ನಗರ ಅಧ್ಯಕ್ಷ ಶಬೀರ್ ಅಝ್ಹರಿ, ಎಸ್.ಜೆ.ಎಮ್. ತಲಪಾಡಿ ಅಧ್ಯಕ್ಷ ಪಿ.ಎಮ್. ಮುಹಮ್ಮದ್ ಮದನಿ, ಉಪಾಧ್ಯಕ್ಷ ಕೆ.ಎಸ್. ಮೊಯ್ದಿನ್ ಬಾವ ಹಾಜಿ ತಲಪಾಡಿ, ಬಂದರ್ ತಾಜ್ ಸ್ಟೀಲ್‌ನ ಮೊಯ್ದಿನ್ ಸ್ವಾಲಿಹ್, ಉದ್ಯಮಿ ಅನ್ವರ್ ಹುಸೈನ್ ಉಳ್ಳಾಲ, ಮೂಸ ಕೆ.ಸಿ.ನಗರ, ಉಚ್ಚಿಲ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಪೆರಿಬೈಲ್, ಯು.ಬಿ ಮುಹಮ್ಮದ್ ಹಾಜಿ, ನೂರಾನಿ ಯತೀಂಖಾನದ ಪ್ರ. ಕಾರ್ಯದರ್ಶಿ ಇಕ್ಬಾಲ್ ಹಾಜಿ, ಎಸ್.ಎಮ್.ಎ ಉಳ್ಳಾಲ್ ಝೋನ್ ಅಧ್ಯಕ್ಷ ಪಿ.ಎ. ಅಹ್ಮದ್ ಕುಂಞಿ ಹಾಜಿ, ಬಿ.ಜೆ.ಎಮ್. ಅಧ್ಯಕ್ಷ ಸುಲೈಮಾನ್ ಹಾಜಿ, ಕೆ.ಸಿ. ನಗರ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಮಾಡೂರು ಜುಮಾ ಮಸೀದಿ ಅಧ್ಯಕ್ಷ ಮಜೀದ್ ಹಸನ್, ಕೋಟೆಕಾರ್ ಜುಮಾ ಮಸೀದಿ ಅಧ್ಯಕ್ಷ ಕೆ.ಎಫ್ ಅಬ್ದುಲ್ ಹಾಜಿ, ನಝೀರ್ ಹಾಜಿ, ಲೆಮನ್ ಮರ್ಚಂಟ್ ಇಬ್ರಾಹೀಂ ಪೂಮನ್ನು ತಲಪಾಡಿ, ಅಬ್ಬಾಸ್ ಹಾಜಿ, ಹನೀಫ್ ಕೋಟೆಪುರ, ವಕ್ಫ್ ಸಮಿತಿ ಸದಸ್ಯ ಉಸ್ಮಾನ್, ಶರೀಫ್ ಮಿಲ್ಲತ್‌ನಗರ, ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ಮೊದಿನ್ ಬಾವ, ಕಾರ್ಯದರ್ಶಿ ಅಹ್ಮದ್ ಬಾವ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಬಶೀರ್, ಎಮ್.ಎಮ್. ಅಬ್ದುಲ್, ರಹೀಂ ಯು.ಬಿ.ಎಮ್., ಕೋಟೆಕಾರ್ ಮಾಜಿ ಸದಸ್ಯ ಅಬ್ದುಲ್ ಬಶೀರ್, ಮುನೀರ್ ಎಸ್.ಎಚ್, ಬಶೀರ್ ಎಸ್.ಎಚ್. ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಸಲಿದ್ದಾರೆ ಎಂದು ಎನ್.ಎಸ್. ಉಮರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News