ಎಸ್ಕೆಎಸ್ಸೆಸ್ಸೆಎಫ್ ಉರುಮಣೆ: ಶಂಸುಲ್ ಉಲಮಾ, ಅಗಲಿದ ಸಮಸ್ತ ನೇತಾರರ ಅನುಸ್ಮರಣೆ
ಮಂಗಳೂರು, ಜ.27: ಎಸ್ಕೆಎಸ್ಸೆಸ್ಸೆಎಫ್ ಉರುಮಣೆ ಶಾಖೆಯ ವತಿಯಿಂದ ಶಂಸುಲ್ ಉಲಮಾ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆಯು ಉರುಮಣೆಯ ಬಾಪು ಉಸ್ತಾದ್ ವೇದಿಕೆ ಶಂಸುಲ್ ಉಲಮಾ ನಗರದಲ್ಲಿ ನಡೆಯಿತು.
ಸೈಯದ್ ಅಮೀರ್ ತಂಙಳ್ ಅಲ್‌ಬುಖಾರಿ ಕಿನ್ಯ ದುಆಗೈದರು. ಎಸ್ಕೆಎಸ್ಸೆಸ್ಸೆಎಫ್ ಉರುಮಣೆ ಶಾಖೆಯ ಅಧ್ಯಕ್ಷ ಹಸೈನಾರ್ ಉರುಮಣೆ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಖಾದರ್ ಅಶ್ವಾಫಿ ಉದ್ಘಾಟಿಸಿದರು. ಅಬ್ದುರ್ರಹ್ಮಾನ್ ಫೈಝಿ ಅಸೈ ಪ್ರಾಸ್ತಾವಿಕ ಭಾಷಣ ಮಾಡಿದರು. ಅಬೂಬಕರ್ ಸಿದ್ದೀಖ್ ಅಝ್‌ಹರಿ ಪಯ್ಯನ್ನೂರು ಮುಖ್ಯ ಪ್ರಭಾಷಣ ಮಾಡಿದರು. ಶಮೀಮ್ ತಂಙಳ್ ಕುಂಬೋಳ್ ಸಮಾರೋಪ ಪ್ರಾರ್ಥನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಎಫ್ ಉರುಮಣೆ ಶಾಖೆ ಉಪಾಧ್ಯಕ್ಷ ಅಬೂಬಕರ್ ದಾರಿಮಿ, ದೇರಳಕಟ್ಟೆ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಮೊಯ್ದಿನ್ ಕುಂಞಿ ಮರಾಠಿಮೂಲೆ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಎಸ್ಕೆಎಸ್ಸೆಸ್ಸೆಎಫ್ ಮಂಜೇಶ್ವರ ಕೌನ್ಸಿಲರ್ ಪಿ.ಎಂ ಅಲಿ ಮುಸ್ಲಿಯಾರ್, ಇಸಾಕ್ ನಾಟೆಕಲ್ ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ಉರುಮಣೆ ಶಾಖೆ ಉಪಾಧ್ಯಕ್ಷ ಮುಹಮ್ಮದ್ ಹನೀಫ್ ನಿಝಾಮಿ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಇರ್ಶಾದ್ ಕುವೆನಾಡು ವಂದಿಸಿದರು.