ಉಳಾಯಿಬೆಟ್ಟು: ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಆ್ಯಂಬುಲೆನ್ಸ್ ಸೇವೆ ಮತ್ತು ಟೈಲರಿಂಗ್ ತರಬೇತಿ ಉದ್ಘಾಟನೆ

Update: 2018-01-28 06:28 GMT

ಮಂಗಳೂರು, ಜ.28: 'ಸರಕಾರಿ ಶಾಲೆ ಉಳಿಸಿ' ಅಭಿಯಾನದ ಅಂಗವಾಗಿ ಉಳಾಯಿಬೆಟ್ಟು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಆ್ಯಂಬುಲೆನ್ಸ್ ಸೇವೆ ಮತ್ತು ಟೈಲರಿಂಗ್ ತರಬೇತಿ ಉದ್ಘಾಟನೆ ಹಾಗೂ ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಉಳಾಯಿಬೆಟ್ಟು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ಲಯನ್ಸ್ ಕ್ಲಬ್ ಕಾವೂರು ಹಾಗೂ ಗ್ರಾಮದ ಹಲವು ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ ಹಾಗೂ ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜಿನ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ವಸಂತ್ ಕುಮಾರ್ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ನ ದಯಾನಂದ್ ಶೆಟ್ಟಿ ಕಡಂಬಿಲ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ತಾಪಂ ಸದಸ್ಯೆ ಅಫ್ಸತ್, ಶ್ರೀ.ಕ್ಷೇ.ಧ.ಗ್ರಾ.ಅ. ಯೋಜನೆ, ಮಂಗಳೂರು ಇದರ ಯೋಜನಾಧಿಕಾರಿ ಉಮರಬ್ಬ, ಸಾಲೆ ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯೀಲ್, ಯೆನೆಪೊಯದ ಅಬ್ದುಲ್ ರಝಾಕ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಅಡ್ಮಿನ್ ಶೇಖ್ ಫಯಾಝ್ ಅಲಿ ಬೈಂದೂರು, ಉಳಾಯಿಬೆಟ್ಟು ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಜೀವ್ ಶೆಟ್ಟಿ ಸಲ್ಲಾಜೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಆರಂತಗೋಡಿ ಮುಂತಾದವರು ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎ.ಮೊಯ್ದಿನ್ ಬಾವ ಅವರು E2 ಗೈಸ್ ಉಳಾಯಿಬೆಟ್ಟು ವತಿಯಿಂದ ಕೊಡುಗೆಯಾಗಿ ನೀಡಿದ ಆ್ಯಂಬುಲೆನ್ಸ್ ಸೇವೆಯನ್ನು ಹಾಗೂ ಉಳಾಯಿಬೆಟ್ಟು ಸೌಹಾರ್ದ ಮೆನ್ಸ್ ಅಸೋಸಿಯೇಶನ್  ಕೊಡುಗೆಯಾಗಿ ನೀಡಿದ ಟೈಲರಿಂಗ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು.

ಮಯ್ಯದ್ದಿ ಅಂಗಡಿಯವರು ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದರು. ಅಲ್ ಇಕ್ರಾ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮಾಲಕ ಮುಹಮ್ಮದ್ ಶರೀಫ್ ಸಿಸಿಟಿವಿ ಕ್ಯಾಮೆರಾ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೆಲ್ವಿನ್ ಡಿಸೋಜ ಇಂಟರ್ ನೆಟ್ ಸಂಪರ್ಕವನ್ನು ಕೊಡುಗೆಯಾಗಿ ನೀಡಿದರು.

ಇದಕ್ಕೂ ಮೊದಲು ನಡೆದ ರಕ್ತದಾನ ಶಿಬಿರದಲ್ಲಿ 112 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ನೂರಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದರು.

ಇದೇ ಸಂದರ್ಭ ಚೇತನ್ ಬಿ.ಕೆ. ನಿರ್ದೇಶನದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News