×
Ad

ವಿಶ್ವದ ಅತಿ ಎತ್ತರದ ವ್ಯಕ್ತಿಯನ್ನು ಭೇಟಿಯಾದ ವಿಶ್ವದ ಅತಿ ಕುಳ್ಳಗಿನ ಮಹಿಳೆ!

Update: 2018-01-28 16:03 IST

ಕೈರೊ, ಜ.28: ಅದು ಅತ್ಯಂತ ಕುತೂಹಲಕರ ಸನ್ನಿವೇಶ. ವಿಶ್ವದ ಅತಿ ಕುಬ್ಜ ಮಹಿಳೆ, ವಿಶ್ವದ ಅತಿ ಎತ್ತರದ ವ್ಯಕ್ತಿಯೊಂದಿಗೆ ಭಾವಚಿತ್ರಕ್ಕೆ ಫೋಸ್ ನೀಡಿದ ಅಪರೂಪದ ಕ್ಷಣ. ಟರ್ಕಿಯ ಸುಲ್ತಾನ್ ಕೊಸೆನ್ ಎತ್ತರ 8 ಅಡಿ 9 ಇಂಚು. ಇವರನ್ನು ಭೇಟಿಯಾದದ್ದು ಜ್ಯೋತಿ ಅಮ್ಗೆ ಎಂಬ ವಿಶ್ವದ ಅತಿ ಕುಬ್ಜ ಮಹಿಳೆ. ಈಕೆಯ ಎತ್ತರ 62.8 ಸೆಂಟಿಮಿಟರ್ ಅಂದರೆ 2 ಅಡಿ 6 ಇಂಚು. ನಾಗ್ಪುರದ ಅಮ್ಗೆ ತನ್ನ ಕುಬ್ಜತೆಗಾಗಿ ಗಿನ್ನಿಸ್ ದಾಖಲೆ ಹೊಂದಿದ್ದಾರೆ.

ಈ ಇಬ್ಬರು ವಿಶೇಷ ವ್ಯಕ್ತಿಗಳು ಸಮಾಗಮವಾದದ್ದು, ಈಜಿಪ್ಟ್‌ನ ಗಿಝಾ ನಗರದಲ್ಲಿ. 25 ವರ್ಷದ ಅಮ್ಗೆ ಮತ್ತು 36 ವರ್ಷದ ಕೊನೆಸ್ ನೀಲ್ ನದಿ ದಂಡೆಯ ಈ ನಗರದಲ್ಲಿ ಭೇಟಿಯಾದ ಭಾವಚಿತ್ರವನ್ನು ಸ್ಟ್ರೇಟ್ ಸೈಮ್ಸ್ ಪ್ರಕಟಿಸಿದೆ.

ಉಭಯ ಗಣ್ಯರನ್ನು ಈಜಿಪ್ಟ್ ಪ್ರವಾಸೋದ್ಯಮ ಉತ್ತೇಜನ ಮಂಡಳಿ, ದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕಾರ್ಯತಂತ್ರದ ಅಂಗವಾಗಿ ಕರೆಸಲಾಗಿತ್ತು ಎಂದು "ಇಂಡಿಪೆಂಡೆಂಟ್" ವರದಿ ಮಾಡಿದೆ. ಇಬ್ಬರನ್ನೂ ಜತೆಗೆ ನಿಲ್ಲಿಸಿ ಛಾಯಾಗ್ರಾಹಕರು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಈ ಚಿತ್ರಗಳು ಸಮಾಜ ಮಾಧ್ಯಮದಲ್ಲಿ ಹಲವು ಸಾವಿರಾರು ಟ್ವೀಟ್ - ಮರುಟ್ವೀಟ್‌ಗಳನ್ನು ಕಂಡಿವೆ.

ಪಿಟ್ಯುಟರಿ ಜೈಜಾಂಟಿಸಮ್ ಎಂಬ ಸ್ಥಿತಿಯಿಂದ ಕೊಸೆನ್ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. 2009ರಲ್ಲಿ ವಿಶ್ವದ ಅತೀ ಎತ್ತರದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಇಡೀ ಮನುಕುಲದ ಇತಿಹಾಸದಲ್ಲೇ 8 ಅಡಿಗಿಂತ ಅಧಿಕ ಎತ್ತರ ಇರುವವರು 10 ಮಂದಿ ಮಾತ್ರ.

ಅಮ್ಗೆ ಇದಕ್ಕೆ ತದ್ವಿರುದ್ಧವಾಗಿ ಆಕೆಂಡ್ರೋಪ್ಲಾಸಿಯಾ ಎಂಬ ಕುಬ್ಜತೆಗೆ ಈಡಾಗಿರುವ ಅಮ್ಗೆ, ಎರಡು ವರ್ಷಗಳ ಮಕ್ಕಳ ಸರಾಸರಿ ಎತ್ತರಕ್ಕಿಂತಲೂ ಕಡಿಮೆ ಎತ್ತರ ಇದ್ದಾರೆ. ಬಿಗ್ ಬಾಸ್, ಅಮೆರಿಕನ್ ಹಾರರ್ ಸ್ಟೋರಿಯಂಥ ಧಾರಾವಾಹಿಗಳಲ್ಲಿ ಇವರು ಮಿಂಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News