×
Ad

ಉಡುಪಿ: ಹೃದಯಾವಭೋಧಿನಿ ಶ್ಲೋಕ ಕಂಠಪಾಠ ಸ್ಪರ್ಧೆ

Update: 2018-01-28 21:39 IST

ಉಡುಪಿ, ಜ.28: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ದಕ್ಷ ಮೆನ್ಸ್ ಕ್ಲಬ್ ಮತ್ತು ಹಿಮಾಲಯ ಡ್ರಗ್ ಕಂಪನಿಯ ಸಹಯೋಗದಲ್ಲಿ ಕರ್ನಾಟಕದ ವಿವಿಧ ಆಯುರ್ವೇದ ಮಹಾವಿದ್ಯಾ ಲಯದ ವಿದ್ಯಾರ್ಥಿಗಳಿಗೆ ಹೃದಯಾವಭೋಧಿನಿ ಶ್ಲೋಕ ಕಂಠಪಾಠ ಸ್ಪರ್ಧೆಯನ್ನು ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಸುಮಾರು 650ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಹೆಸರು ನೊಂದಾಯಿಸಿದ್ದರು. ಒಟ್ಟು ಮೂರು ಹಂತಗಳಲ್ಲಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿಗೆ 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಅದರಲ್ಲಿ ಕುತ್ಪಾಡಿ ಎಸ್‌ಡಿಎಂನ ಸಂದೀಪ್ ಆಚಾರ್ ಪ್ರಥಮ ಬೆಂಗಳೂರು ಎಸ್‌ಡಿಎಂ ಕಾಲೇಜಿನ ಶಾದ ದ್ವಿತೀಯ ಬಹುಮಾನ ಪಡೆದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಶ್ರೀಕಾಂತ್ ಯು. ವಹಿಸಿದ್ದರು. ತೀರ್ಪುಗಾರರಾದ ಡಾ.ಮುರಳೀಧರ ಶರ್ಮ, ಡಾ.ನಿರಂಜನ್ ರಾವ್, ಡಾ.ಸತ್ಯನಾರಾಯಣ ಭಟ್, ಡಾ.ರಾಘವೇಂದ್ರ ಉಡುಪ, ಡಾ. ಉದಯ್ ಕುಮಾರ್, ಸ್ಪರ್ಧೆಯ ಸಂಘಟನಾ ಕಾರ್ಯದರ್ಶಿ ಡಾ.ಶ್ರೀನಿಧಿ, ಹಿಮಾಲಯ ಡ್ರಗ್ ಕಂಪನಿಯ ಡಾ.ಅರ್ಚನಾ ಹೆಗ್ಡೆ ಉಪಸ್ಥಿತರಿದ್ದರು.

ಡಾ.ರವಿಕೃಷ್ಣ ಸ್ವಾಗತಿಸಿದರು. ಸ್ಪರ್ಧೆಯ ವರದಿಯನ್ನು ಡಾ.ರವಿ ಮಂಡಿಸಿ ದರು. ಡಾ.ಯೋಗೀಶ ಆಚಾರ್ಯ ವಂದಿಸಿದರು. ಡಾ.ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News