‘ಭಾರತ ರತ್ನ’ ಪುರಸ್ಕೃತ ಅಮರ್ತ್ಯ ಸೇನ್‌ರನ್ನು ‘ದೇಶದ್ರೋಹಿ’ ಎಂದ ಸುಬ್ರಮಣಿಯನ್ ಸ್ವಾಮಿ

Update: 2018-01-28 16:37 GMT

ಹೊಸದಿಲ್ಲಿ, ಜ. 27: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ‘ಭಾರತ ರತ್ನ’ ಗೌರವಾನ್ವಿತ ಅಮರ್ತ್ಯ ಸೇನ್ ಅವರನ್ನು ‘ದೇಶದ್ರೋಹಿ’ ಎಂದಿದ್ದಾರೆ. ಆರೆಸ್ಸೆಸ್ ದೇಶದ ನಾಗರಿಕರು. ಅವರು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಆದರೆ, ಅವರ ಪರಿಶ್ರಮವನ್ನು ಗುರುತಿಸುತ್ತಿಲ್ಲ. ಆರೆಸ್ಸೆಸ್‌ನವರು ಯಾವುದೇ ನಿರೀಕ್ಷೆ ಇಲ್ಲದೆ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ಆದರೆ, ಎನ್‌ಡಿಎ ‘ದೇಶದ್ರೋಹಿ’ಯಾಗಿರುವ ಅಮರ್ತ್ಯ ಸೇನ್ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸಿತ್ತು. ನಲಂದಾ ವಿಶ್ವವಿದ್ಯಾನಿಲಯವನ್ನು ಲೂಟಿ ಮಾಡಿರುವುದು ಬಿಟ್ಟರೆ ಅವರು ದೇಶಕ್ಕಾಗಿ ಮಾಡಿರುವುದಾದರೂ ಏನು ?, ಅವರು ಕೇವಲ ಎಡಪಂಥೀಯರಾದ ಕಾರಣಕ್ಕೆ ಹಾಗೂ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಒತ್ತಾಯ ಹೇರಿರುವುದಕ್ಕೆ ಪ್ರಶಸ್ತಿ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

 ಆರೆಸ್ಸೆಸ್ ನಾಯಕರಿಗೆ ಪದ್ಮ ಪ್ರಶಸ್ತಿ ನೀಡಿರುವುದಕ್ಕೆ ಬಿಜೆಪಿಯ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸುಬ್ರಣಮಣಿಯನ್ ಸ್ವಾಮಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಸರಕಾರ ಪದ್ಮ ಪಶಸ್ತಿ ನೀಡಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದರು. ಅವರು ತಮ್ಮ ಟ್ವೀಟ್‌ನಲ್ಲಿ ಆರೆಸ್ಸೆಸ್ ನಾಯಕ ವೇದ್ ಪ್ರಕಾಶ್ ನಂದಾ ಹಾಗೂ ಕೇರಳದ ಆರೆಸ್ಸೆಸ್ ಪ್ರಚಾರಕ್ ಪಿ. ಪರಮೇಶ್ವರ್ ಸೇರಿದಂತೆ ಪದ್ಮ ಪ್ರಶಸ್ತಿ ಪಡೆದ ಐದು ಮಂದಿಯ ಹೆಸರುಳ್ಳ ಪಟ್ಟಿ ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News